ಅಮರಾವತಿ: ಇಂದು ರೀಲ್ಸ್ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್ ಎಂದು ಫೇಮಸ್ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್ (video) ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್ ಕೂಡ ಜಾಸ್ತಿಯಾಗುತ್ತಿದೆ.
ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ.
ತಿರುಮಲ ಬೆಟ್ಟದ ತಪ್ಪಲಿನಲ್ಲಿ ಪುಷ್ಪ-2 ಚಿತ್ರದ ‘ಕಿಸ್ಸಿಕ್’ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಯುವತಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
రీల్ కోసం తిరుమల కొండ పై పుష్ప 2 'కిస్సిక్' పాటకు డాన్స్
— Telugu Scribe (@TeluguScribe) December 4, 2024
ఓ యువతి తిరుమల కొండ దిగువన పుష్ప-2 మూవీలోని 'కిస్సిక్' పాటకు డాన్స్ చేసిన వీడియో తన ఇన్స్టా పేజీలో పోస్ట్ చేసింది.
ఇది కాస్తా వైరల్ కావడంతో పలువురు ఆగ్రహం వ్యక్తం చేస్తున్నారు.. వ్యూస్ కోసం శ్రీవారి సన్నిధిని కూడా వదలడం… pic.twitter.com/PLmEypMVys
ಇದು ವೈರಲ್ ಆಗುತ್ತಿದ್ದಂತೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ಇದರಲ್ಲಿ ತಪ್ಪೇನು..? ಎಂದು ಪರ ವಿರೋಧ ಚರ್ಚೆಗಿಳಿದಿದ್ದಾರೆ.