ದೊಡ್ಡಬಳ್ಳಾಪುರ (Doddaballapura): ಕಳೆದ ವಾರ ನಡೆದಿದ್ದ ವೃದ್ಧೆಯ ಮಾಂಗಲ್ಯ ಸರ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.
ಡಿ.11ರಂದು ಹುಣಸೆ ವ್ಯಾಪಾರಿಗಳ ಸೋಗಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ವೃದ್ಧೆಯ ಮಾಂಗಲ್ಯ ಸರ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕೆಸ್ತೂರು ಗ್ರಾಮದ ಬಳಿ ನಡೆದಿತ್ತು.
63 ವರ್ಷದ ಸರಸ್ವತಮ್ಮ ಎನ್ನುವವರು, ಹಸು ಮೇಸಲು ತೆರಳಿದ್ದ ವೇಳೆ, ಹುಣಸೆ ಮರ ವ್ಯಾಪಾರಿಗಳು ಎಂಬಂತೆ ಬಂದ ಅಪರಿಚಿತ ಇಬ್ಬರು ದುಷ್ಕರ್ಮಿಗಳು, ವೃದ್ಧೆಯ ಮಾತಿಗೆಳೆದು, ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 52 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಸಿ ಟಿವಿ ಪರಿಶೀಲನೆ: ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಪೊಲೀಸರು ಸುಮಾರು 50 ರಿಂದ 60 ಸಿಸಿ ಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರನ್ನು ವಿಜಯಪುರ ಸಮೀಪದ ಶಿಂಗವಾರ ಗ್ರಾಮದ ಷಡಕ್ಷರಿ 30 (ವರ್ಷ), ಪಾಲನಜೋಗಿಹಳ್ಳಿ ನಿವಾಸಿ ಆದಿನಾರಾಯಣ (40 ವರ್ಷ) ಎಂದು ಗುರುತಿಸಲಾಗಿದೆ.
ಕಳ್ಳನಾದ ರೈತ..!; ಬಂಧಿತ ಷಡಕ್ಷರಿ ರೈತನಾಗಿದ್ದು, ಹಲವು ದುಶ್ಚಟಗಳಿಗೆ ಬಲಿಯಾಗಿ ಸಾಲಗಾರನಾಗಿದ್ದ, ಇದರಿಂದ ಹೊರಬರಲು, ಕೂಲಿ ಕಾರ್ಮಿಕ ಆದಿನಾರಾಯಣನ ಜೊತೆಯಲ್ಲಿ ಈ ಕೃತ್ಯಕ್ಕೆ ಮಾಡಿದ್ದ ಎಂದು ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ತಿಳಿಸಿದ್ದಾರೆ.