ಬೆಂಗಳೂರು: ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಚಿನ್ನ ಖರೀದಿಸಿ ಹಾಗೂ ಹಣವನ್ನೂ ವಂಚನೆ ಮಾಡಿರುವ ಆರೋಪ ಪ್ರಕರಣ ಸಂಬಂಧ, ಆರೋಪಿ ಐಶ್ವರ್ಯ ಗೌಡ ಕುರಿತಂತೆ ಕೆಲ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದ ಡಿಕೆ ಸುರೇಶ್ (DK Suresh) ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಐಶ್ವರ್ಯ ಗೌಡ ಎಂಬುವವರು ನನ್ನ ಹೆಸರನ್ನು ಬಳಸಿಕೊಂಡು ಹಲವರಿಗೆ ಚಿನ್ನಾಭರಣ ಹಾಗೂ ಹಣವನ್ನು ವಂಚಿಸುತ್ತಿರುವುದಾಗಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿವೆ.
ಈ ಹಿನ್ನೆಲೆಯಲ್ಲಿ ವಂಚನೆ ಮಾಡಿದವರ ವಿರುದ್ದ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೇ ಮುಂಬರುವ ದಿನಗಳಲ್ಲಿ ಕ್ರಮಕೈಗೊಳ್ಳಿ ಇಂತಹ ಅನ್ಯಾಯಗಳು ಆಗದಂತೆ ಕ್ರಮಕೂಗೊಳ್ಳಿ ಎಂದು ಡಿಕೆ ಸುರೇಶ್ ಅವರು ಕಮೀಷನರ್ ಅವರಿಗೆ ಬರೆದ ದೂರಿನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈಗಾಗಲೇ ವಂಚನೆ ಆರೋಪದಡಿ ಐಶ್ವರ್ಯ ಗೌಡ ಮತ್ತಾಕೆಯ ಪತಿ ಹರೀಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಪ್ರಕರಣದಲ್ಲಿ ನಟ ಧರ್ಮ ಅವರ ಹೆಸರು ಕೇಳಿ ಬಂದಿದ್ದು, ನಾಪತ್ತೆಯಾಗಿರುವ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.