ಚೀನಾ: ಟಿಬೆಟ್‌ನ ಅನೇಕ ಸ್ಥಳಗಳಲ್ಲಿ 7.1 ತೀವ್ರತೆಯಲ್ಲಿ ಭೂಕಂಪನ (Earthquakes) ಸಂಭವಿಸಿದ್ದು, ಹಲವು ಜನರು ಮೃತಪಟ್ಟ ಘಟನೆ ವರದಿಯಾಗಿದೆ.
Surveillance camera captures the terrifying moment a 6.8-magnitude earthquake hit Tibet's Lhatse County, claiming at least 32 lives
— WION (@WIONews) January 7, 2025
.
.
.
.#Tibet #Earthquake #TibetEarthquake #WIONUncut pic.twitter.com/Tm2UZCoXEq
ಮೂಲಗಳ ಪ್ರಕಾರ, ಕಳೆದ ಒಂದು ಗಂಟೆಯಲ್ಲಿ ಭೂಮಿ 6 ಬಾರಿ ಕಂಪಸಿದೆ. ಭೂಕಂಪದಲ್ಲಿ ಟಿಬೆಟಿಯನ್ ಪ್ರದೇಶದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ.
ಜೊತೆಗೆ 38 ಜನರಿಗೆ ಗಾಯಗಳನ್ನು ವರದಿಯಾಗಿವೆ. ಭೂಕಂಪದ ಕೇಂದ್ರದ ಬಳಿ ಹಲವಾರು ಕಟ್ಟಡಗಳು ಕುಸಿದಿವೆ. ಪ್ರಬಲ ಭೂಕಂಪನದಿಂದಾಗಿ ಭಾರತ, ನೇಪಾಳ ಮತ್ತು ಭೂತಾನ್ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ನಲುಗಿವೆ.
At least 40 feared killed after a powerful 6.8 magnitude earthquake in #TingriCounty of #ShigatseCity in #Tibet. The quake jolted Dingri County in the city of Xigaze in Tibet Autonomous Region in #China at 9:05 am Tuesday (#Beijing Time), #earthquake #TibetEarthquake pic.twitter.com/Pb6Y6jcwaL
— Lokmat Times Nagpur (@LokmatTimes_ngp) January 7, 2025
ದೆಹಲಿ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಕಂಪನಗಳು ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪದ ಅನುಭವವಾಗಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮೊದಲು 7.1 ತೀವ್ರತೆಯಲ್ಲಿ ಭೂಕಂಪವು ನೇಪಾಳ-ಟಿಬೆಟ್ ಗಡಿಯ ಸಮೀಪವಿರುವ ಕ್ಸಿಜಾಂಗ್‌ನಲ್ಲಿ ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ.
ಅದಾದ ಬಳಿಕ ಟಿಬೆಟ್‌ನ ಶಿಗಾಟ್ಟೆ ನಗರದಲ್ಲಿ 6.8 ರ ತೀವ್ರತೆಯನ್ನು ದಾಖಲಿಸಿದ್ದಾರೆ. ಕ್ಸಿಜಾಂಗ್ ಪ್ರದೇಶದಲ್ಲಿ 4.7 ಮತ್ತು 4.9 ತೀವ್ರತೆಯ ಎರಡು ಭೂಕಂಪನ ಸಂಭವಿಸಿದೆ.