ದೊಡ್ಡಬಳ್ಳಾಪುರ (Doddaballapura): ಗ್ರಾಮಿಣ ಉಪ ವಿಭಾಗ ವ್ಯಾಪ್ತಿಗೆ ಬರುವ ಕನಸವಾಡಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ನಾಳೆ (ಜ.8) ಬುಧವಾರ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮೀಣ ಉಪವಿಭಾಗದ ಎಇಇ ಮಂಜುನಾಥ್ ಮಾಹಿತಿ ನೀಡಿದ್ದು, ಕನಸವಾಡಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ಜನವರಿ 08 ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆವರೆಗೆ ವಿದ್ಯುತ್ ಸರಬರಾಜಾಗುತ್ತಿರುವ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.
ಆದ್ದರಿಂದ ವಿದ್ಯುತ್ ಅಡಚಣೆ ಬಗ್ಗೆ ಎಚ್.ಟಿ ಮತ್ತು ಎಲ್.ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಎಇಇ ಮಂಜುನಾಥ್ ತಿಳಿಸಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ಕನಸವಾಡಿ, ಮಧುರೆ, ಕಾಡನೂರು, ನಾಗನಹಳ್ಳಿ, ಕಾಡನೂರುಪಾಳ್ಯ ಚನ್ನದೇವಿ ಅಗ್ರಹಾರ, ಕಾರೇಪುರ, ಮಾದಗೊಂಡನಹಳ್ಳಿ, ಹೊನ್ನಾದೇವಿಪುರ, ಹೊನ್ನಾವಾರ, ರಾಮದೇವನಹಳ್ಳಿ, ಕಾರೇಪುರ, ಗಂಡ್ರಗೋಳಿಪುರ, ಕನ್ನಮಂಗಲ, ಬೀರಯ್ಯನಪಾಳ್ಯ, ಕೆಂಜಿಗಾನಹಳ್ಳಿ, ಬಂಡಯ್ಯನಪಾಳ್ಯ.
ಕೋಡಿಹಳ್ಳಿ, ಮಲ್ಲೋಹಳ್ಳಿ, ಭದ್ರಾಪುರ ಶಾಸ್ತ್ರಿಪಾಳ್ಯ, ಮುಪ್ಪಡಿಘಟ್ಟ, ಕಮ್ಮಸಂದ್ರ, ಹಾಲೇನಹಳ್ಳಿ, ಕಲ್ಲೋಡು ಕೆಂಜಿಗಾನಹಳ್ಳಿ, ದೊಡ್ಡಕುಕ್ಕನಹಳ್ಳಿ, ಯಲ್ಲಾದಹಳ್ಳಿ, ಮುಪ್ಪಡಿಘಟ್ಟ, ಇಸ್ತೂರು, ಪುರುಶನಹಳ್ಳಿ ಪುಟ್ಟೇನಹಳ್ಳಿ, ಬಿಟಿಎಸ್ ಮಿಲ್, ಮಲ್ಲೋಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)