ಪ್ರಕಾಶಂ: ಮಾನವ ಕುಲ ಬೆಚ್ಚಿ ಬೀಳುವ (Shocking) ಘಟನೆಯೊಂದು ಮುತ್ತಿನನಗರಿ ಹೈದ್ರಾಬಾದ್ ನಲ್ಲಿ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕಾಶಂ ಜಿಲ್ಲೆಯ ಜೆಪಿ ಚಿರುವು ಮೂಲದ ಗುರುಮೂರ್ತಿ ಹೆಂಡ್ತಿಯನ್ನ ಗರ್ಭಿಣಿ ಪತ್ನಿಯನ್ನು ಕೊಂದು, ಪತಿ ದೇಹವನ್ನು ಕುಕ್ಕರ್ ನಲ್ಲಿ ಬೇಯಿಸಿ ವಿಕೃತಿ ಮೆರೆದಿರುವ ಪಾಪಿ ಪತಿಯಾಗಿದ್ದಾನೆ.
DRDO ದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಗುರುಮೂರ್ತಿ ಪತ್ನಿಯನ್ನ ಹತ್ಯೆಗೈದು ಸಿಕ್ಕಿಬಿದ್ದಿದ್ದಾನೆ.
ವೆಂಕಟ ಮಾಧವಿ (35 ವರ್ಷ) ಮೃತ ದುರ್ದೈವಿ. ಈಕೆ ಗಂಡ ಗುರುಮೂರ್ತಿ ಅವರೊಂದಿಗೆ ಜಿಲ್ಲಾಗುಡದ ನ್ಯೂ ವೆಂಕಟೇಶ್ವರ ನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಕಳೆದ ಜನವರಿ 15ರಂದು ಮಾಧವಿ ಕಾಣೆಯಾಗಿದ್ದಾಳೆ ಎಂದು ಪೋಷಕರು ಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸುವ ಸಮಯದಲ್ಲಿ ತನಗೆ ಏನೂ ತಿಳಿದಿಲ್ಲವೆಂಬಂತೆ ಗುರುಮೂರ್ತಿ ತನ್ನ ಅತ್ತೆ ಮಾವನೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದರಂತೆ, ಆಗಲೇ ಪೊಲೀಸರಿಗೆ ಗುರುಮೂರ್ತಿ ಮೇಲೆ ಅನುಮಾನ ಮೂಡಿತ್ತು. ನಂತರ ತೀವ್ರ ತನಿಖೆ ನಡೆಸಿದಾಗ ಈ ಅಪರಾಧ ಬೆಳಕಿಗೆ ಬಂದಿದೆ.
ಅವನು ತನ್ನ ಹೆಂಡತಿಯನ್ನು ಎಷ್ಟು ಕ್ರೂರವಾಗಿ ಕೊಂದಿದ್ದಾನೆಂದು ತಿಳಿದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಆಕೆಯ ದೇಹವನ್ನು ಮಟನ್ ಕತ್ತರಿಸುವ ಚಾಕುವಿನಿಂದ ಕತ್ತರಿಸಿ, ಪ್ರೆಶರ್ ಕುಕ್ಕರ್ ನಲ್ಲಿ ಕುದಿಸಿದ್ದಾನೆ ಎಂದು ವರದಿಯಾಗಿದೆ.
ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದೇಹದ ಭಾಗಗಳನ್ನು ಕುದಿಸಿ ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆಂದು ವರದಿಯಾಗಿದೆ.