ಬೆಂಗಳೂರು: ರಾತ್ರಿ ಸಮಯದಲ್ಲಿ ರೋಡಿಗಿಳಿದ ಪುಂಡರ ಗುಂಪೊಂದು ಲಾಂಗ್ ತೋರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವ ಭಂಡತನ ಪ್ರದರ್ಶಿಸಿದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ರೀತಿ ಹುಚ್ಚಾಟ ಮೆರೆದ ಪುಂಡರನ್ನು ಹೆಡೆಮುರಿ ಕಟ್ಟುವಂತೆ ಪೊಲೀಸರಿಗೆ ಸಾರ್ವಜನಿಕರು ಆಗ್ರಹಿಸಿದ್ದರು.
ಸುಮಾರು 20ಕ್ಕೂ ಹೆಚ್ಚು ಯುವಕರು ಬೈಕ್‌ನಲ್ಲಿ ಯಾವುದೇ ಹೆಲ್ಮೆಟ್ ಕೂಡ ಧರಿಸದೆ ಕೈಯಲ್ಲಿ ಲಾಂಗ್ ಹಿಡಿದು, ವೀಲಿಂಗ್ ಕೂಡ ಮಾಡಿದ್ದಾರೆ.
ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರಿಗೆ ಆತಂಕ ಸೃಷ್ಟಿಸಿದ್ದರು. ಈ ವಿಡಿಯೋ ಅನ್ನು ಹಲವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಕೂಡ ಮಾಡಿದ್ದರು.
ಪೊಲೀಸರು ಈ ವಿಡಿಯೋ ಆಧರಿಸಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಾಂಗ್ ಹಿಡಿದಿದ್ದ ಕೈಗಳನ್ನು ಲಾಕ್ ಮಾಡಿ ಕಂಬಿ ಎಣಿಸಲು ಕಳಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪೊಲೀಸರು ದೌಲತಲ್ ಮೆರೆದವರೆಲ್ಲ ಎಂಬ ಟ್ರೆಂಡಿಗ್ ವಿಡಿಯೋ ಮೂಲಕ ಹುಚ್ಚಾಟ ಮೆರೆದವರಿಗೆ ತಿರುಗೇಟು ನೀಡಿದ್ದಾರೆ.