Astrology: Likely to be a memorable day

ದಿನ ಭವಿಷ್ಯ, ಫೆ.28, ಈ ರಾಶಿಯವರಿಂದು ದೂರ ಸಂಚಾರ, ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ

Astrology ಶುಕ್ರವಾರ, ಫೆಬ್ರವರಿ 28 , 2025 ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ: ಲಾಭ ಸ್ಥಾನ ಗತನಾದ ಗುರುವಿನಿಂದಾಗಿ ಅನಿರೀಕ್ಷಿತ ಎಷ್ಟೋ ಕಾರ್ಯ ಸಾಧನೆಯಾಗಲಿವೆ. ಮುಖ್ಯವಾಗಿ ದೂರ ಸಂಚಾರ, ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ದಿನಾಂತ್ಯದಲ್ಲಿ ಸಂಭ್ರಮವಿದೆ. (ಭಕ್ತಿಯಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ವೃಷಭ ರಾಶಿ: ಆರ್ಥಿಕವಾಗಿ ಹಾಗೂ ಸಾಂಸಾರಿಕವಾಗಿ ಉತ್ತಮ ಕೆಲಸಗಳಾದರೂ ಕೆಲವು ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ನೋವುಂಟಾಗಲಿದೆ.
ಹೊಗಳಿಕೆಗೆ ಮರುಳಾಗದಿರಿ.
ಹಂತ ಹಂತವಾಗಿ ಯಶಸ್ಸು ಕಂಡು ಬಂದೀತು. (ಭಕ್ತಿಯಿಂದ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಕೋರ್ಟು ಕಚೇರಿ ಕೆಲಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ, ಮುಖ್ಯವಾಗಿ ಯಾವುದೇ ಕೆಲಸಕಾರ್ಯ ಅರ್ಧಕ್ಕೆ ನಿಂತು ಆರ್ಥಿಕ ಮುಗ್ಗಟ್ಟು ಕಾಡಬಹುದು ಜಾಗರೂಕರಾಗಿರಿ. (ಭಕ್ತಿಯಿಂದ ಶ್ರೀ ಶಿರಡಿ ಸಾಯಿಬಾಬ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ಮಕ್ಕಳ ವಿದ್ಯಾ ಭ್ಯಾಸ, ಉದ್ಯೋಗಿಗಳ ಉದ್ಯೋಗದ ಸಮಸ್ಯೆ ಕಂಡು ಬರಬಹುದು. ನಿಮ್ಮ ತಾಳ್ಮೆಗೆ ಇದು ಸಕಾಲ ವೆನಿಸಲಿದೆ. ಹಲವು ಸಂದರ್ಭ ಗಳಲ್ಲಿ ತಾಳ್ಮೆಯೇ ಉತ್ತರ ನೀಡಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಸಿಂಹ ರಾಶಿ: ಕೆಟ್ಟ ಜನರ ಸಹಕಾರದಿಂದ ಅಪಕೀರ್ತಿ ಉಂಟಾದೀತು.ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗರೂಕ ರಾಗಿರಿ. ಕೌಟುಂಬಿಕ ಸಮಸ್ಯೆ ಗಳು ಕಾಡಬಹುದು. ನೌಕರ ವರ್ಗ ದವರಿಗೆ ಉತ್ತಮ ಬದಲಾವಣೆ ಕಂಡು ಬರಲಿದೆ. (ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕನ್ಯಾ ರಾಶಿ: ಕೆಲಸ ಕಾರ್ಯ ಗಳಲ್ಲಿ ವಿಘ್ನ ಭಯ ಕಂಡು ಬಂದರೂ ಯಶಸ್ಸು ತೋರಿ ಬರಲಿದೆ.ಸಿಟ್ಟಿನ ನಿರ್ಣಯ ಗಳಿಂದ ಅನಾವಶ್ಯಕ ತೊಂದರೆ ಅನುಭವಿಸುವಿರಿ ಸಂಯಮದಿಂದ ವ್ಯವಹರಿಸಿ. (ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ಏಕಾದಶ ಸ್ಥಾನ ರಾಹುವಿನಿಂದಾಗಿ ಹಾಗೂ ಶನಿಯ ಲಾಭಸ್ಥಾನದಿಂದಾಗಿ ಉನ್ನತಿ ತೋರಿ ಬರಲಿದೆ, ಅದಾಗ್ಯೂ ಗುರುವಿನ ವ್ಯಯಸ್ಥಿತಿ ಅನೇಕ ರೀತಿಯ ಖರ್ಚುವೆಚ್ಚಗಳ ಹಾದಿ ಎದುರಾಗಬಹುದು. ಉದ್ಯೋಗಿಗಳಿಗೆ ವೇತನ ಹೆಚ್ಚಳ ತರಲಿದೆ. (ಭಕ್ತಿಯಿಂದ ಶ್ರೀ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ಮಹಿಳೆಯರಿಗೆ ಉದ್ಯೋಗ ಲಾಭವಿರುತ್ತದೆ. ಕೃಷಿಕ ವರ್ಗದವರಿಗೆ ಆದಾಯ ವರ್ಧಿಸಲಿದೆ. ಸಂಧಿ ನೋವು ಮೂಳೆ ಮುರಿತ, ಅವಘಡ ಗಳಿಗೆ ಕಾರಣವಾದೀತು. ಆಲಸ್ಯ, ಉದಾಸೀನತೆ ಉಂಟಾಗಬಹುದು. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಧನಸ್ಸು ರಾಶಿ: ಉದ್ಯೋಗಿಗಳಿಗೆ ವಿದೇಶದಲ್ಲಿ ಆಕರ್ಷಕವಾದ ದುಡಿಮೆಗೆ ಅವಕಾಶಗಳು ಒದಗಿ ಬರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಕಂಡುಕೊಳ್ಳಲು ಇದು ಸಕಾಲ. ವ್ಯಾಪಾರ ವ್ಯವಹಾರಗಳು ಚೇತರಿಕೆ ಕೊಟ್ಟು ಆದಾಯ ವೃದ್ಧಿಸಲಿವೆ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ಸಾಮಾಜಿಕವಾಗಿ ಉನ್ನತ ಸ್ಥಾನಮಾನಗಳು, ಕ್ರಿಯಾಶೀಲತೆಯಲ್ಲಿ ಪ್ರಶಂಸೆ ಸಿಗಲಿದೆ. ಮುಖ್ಯವಾಗಿ ನಿಮ್ಮ ವಿಶ್ವಾಸದ ದುರುಪಯೋಗ ವಾಗದಂತೆ ನಿಮ್ಮಲ್ಲಿ ಎಚ್ಚರವಿರಲಿ. ಮಾತಿನಿಂದ ಅನಾವಶ್ಯಕ ಮನಸ್ತಾಪ ವಾಗದಂತೆ ಜಾಗ್ರತೆವಹಿಸಿರಿ. (ಭಕ್ತಿಯಿಂದ ಶ್ರೀ ಚಂದ್ರ ಮೌಳೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ: ಕ್ರೀಡಾ ಜಗತ್ತಿನ ಪಟುಗಳಿಗೆ ಜಯವು ಕಾದಿದೆ. ಹದಗೆಟ್ಟ ಆರೋಗ್ಯ ಉತ್ತಮ ರೀತಿಯಲ್ಲಿ ಸುಧಾರಿಸಲಿದೆ. ಕೃಷಿ ಹಾಗೂ ರೈತವರ್ಗಕ್ಕೆ ಸಕಾಲದಲ್ಲಿ ಬೆಳೆಗಳ ವಿಲೇವಾರಿ ಧನಲಾಭ ವನ್ನು ಕೊಡಲಿದೆ.ಆರೋಗ್ಯದಲ್ಲಿ ಜಾಗ್ರತೆ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ: ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಜೀವನದ ಬಹುಮುಖ್ಯ ಗುರಿಯೊಂದನ್ನು ಸಾಧಿಸಲಿದ್ದೀರಿ. ಹಳೆಯ ಬಾಕಿ ಕೆಲಸಗಳು ಅತೀ ಶೀಘ್ರದಲ್ಲಿ ನೆರವೇರಲಿವೆ. ರಾಜಕೀಯ ವರ್ಗದವರಿಗೆ ಉತ್ತಮ ಭವಿಷ್ಯವಿದೆ. (ಭಕ್ತಿಯಿಂದ ಶ್ರೀ ಉಮಾ ಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ರಾಹುಕಾಲ: 10:30AM ರಿಂದ 12:00PM
ಗುಳಿಕಕಾಲ: 07:30AM ರಿಂದ 09:00AM
ಯಮಗಂಡಕಾಲ: 03:00PM ರಿಂದ 04:30PM

ರಾಜಕೀಯ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್ ಕಿಡಿ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್

"ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ (D.K. Shivakumar) ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ... R. Ashoka

[ccc_my_favorite_select_button post_id="113127"]
RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದರು.

[ccc_my_favorite_select_button post_id="113124"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

17 ವರ್ಷದ ಬಾಲಕನ ಶವ ಆಘಾತಕಾರಿ ಸ್ಥಿತಿಯಲ್ಲಿ (shocking condition) ಪತ್ತೆಯಾಗಿರುವ ಘಟನೆ ನಗರದ ಕರೇನಹಳ್ಳಿಯ ಟೆಂಟ್ ಹಿಂಭಾಗದ ಗುಟ್ಟೆಯಲ್ಲಿ ಪತ್ತೆಯಾಗಿದೆ.

[ccc_my_favorite_select_button post_id="113099"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!