ದೊಡ್ಡಬಳ್ಳಾಪುರ: ‘ದ್ವಿತೀಯ ಪಿಯುಸಿ (PUC) ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಬೇಸರಗೊಂಡಿದ್ದರು’ ಎನ್ನಲಾದ ರೂಪಾಶ್ರೀ (18) ಎಂಬುವವರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೇಳೆ ಕೋಟೆ ಮೂಲದ ಗಡ್ಡಂಬಚ್ಚಹಳ್ಳಿ ನಿವಾಸಿ ರೂಪಶ್ರೀ ನಗರದ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಪರೀಕ್ಷೆ ಬರೆದಿದ್ದರು.
ಆದರೆ ಮಂಗಳವಾರ ಬಿಡುಗಡೆ ಮಾಡಲಾದ ಫಲಿತಾಂಶದಲ್ಲಿ ರೂಪಾಶ್ರೀ ಅನುತೀರ್ಣರಾಗಿದ್ದು, ಇದರಿಂದ ಬೇಸತ್ತು ತಾಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ರಾಗರಾಳ್ಳುಗುಟ್ಟೆ ಬಳಿ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.