ಚಿಕ್ಕಬಳ್ಳಾಪುರ (Harithalekhani): ಕಟಾವಿಗೆ ಸಿದ್ದವಾಗಿದ್ದ ಫಸಲುಯುಕ್ತ ದ್ರಾಕ್ಷಿ (grape) ತೋಟವನ್ನು ಅಪರಿಚಿತ ದುಷ್ಕರ್ಮಿಗಳು ನಾಶ ಪಡಿಸಿರುವ ಘಟನೆ ತಾಲ್ಲೂಕಿನ ಕೊಂಡೇನಹಳ್ಳಿ- ಕಡಶೀಗನಹಳ್ಳಿ ನಡುವಿನ ದ್ರಾಕ್ಷಿ ತೋಟದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಕೊಂಡೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವವರಿಗೆ ಕೊಂಡೇನಹಳ್ಳಿ- ಕಡಶೀಗನಹಳ್ಳಿ ಮದ್ಯೆ ಎರಡು ಎಕರೆ ದ್ರಾಕ್ಷಿ (grape) ತೋಟವಿದ್ದು, ತಡರಾತ್ರಿ ದುಷ್ಕರ್ಮಿಗಳು ಅವರ ತೋಟದಲ್ಲಿನ ಫಸಲಿಗೆ ಬಂದಿದ್ದ ಸುಮಾರು 50ಕ್ಕೂ ಹೆಚ್ಚು ದ್ರಾಕ್ಷಿ ಗಿಡಗಳನ್ನು ಕಡಿದು, ದ್ರಾಕ್ಷಿ ಚಪ್ಪರಕ್ಕೆ ಬಳಸಿದ ಕಲ್ಲು ಕೂಚಗಳನ್ನು ಮುರಿದು, ಪೆನ್ಸಿಂಗ್ ಮೆಶ್ ಬಲೆ, ದ್ರಾಕ್ಷಿಗೆ ಅಳವಡಿಸಿದ್ದ ಡ್ರಿಪ್ ಪೈಪುಗಳು ನೀರಾವರಿ ಪೈಪುಗಳನ್ನ ಕತ್ತರಿಸಿ ನೆಳಕ್ಕುರುಳಿಸಿದ್ದಾರೆ.
ರೂ 10 ಲಕ್ಷಕ್ಕೂ ಹೆಚ್ಚು ನಷ್ಟ ಮಾಡಿದ್ದಾರೆ.ಸುಮಾರು ಇಪ್ಪತೈದು ಜನ ಈ ದುಷ್ಕೃತ್ಯದಲ್ಲಿ ಬಾಗಿಯಾಗಿರಬಹುದೆಂದು ಅಂದಾಜಿಸಲಾಗಿದೆ.
ನಾರಾಯಣಸ್ವಾಮಿ ಯವರ ಪುತ್ರ ಪ್ರದೀಪ್ ಮಾತನಾಡಿ, ರಾಕ್ಷಸರು ಮಾಡೋ ಕೆಲಸ ಮಾಡಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಬೇಕು. ಅವರನ್ನ ಬೀದಿಯಲ್ಲಿ ಮೆರವಣಿಗೆ ಮಾಡಬೇಕು ಹಾಕಿದ್ದ ಬಂಡವಾಳ ಕೈಗೆ ಸಿಗುತ್ತೆ ಅಂತ ಆಸೆಗಣ್ಣುಗಳಿಂದ ಕಾಯುತಿದ್ದ ವೇಳೆ ಫಸಲು ತುಂಬಿದ ದ್ರಾಕ್ಷಿಯನ್ನ ಕತ್ತರಿಸಿ ಬಿಸಾಕಿದ ದರುಳರನ್ನ ಕೂಡಲೆ ಬಂಧಿಸಿ ಕ್ರಮ ಜರುಗಿಸಬೇಕೆಂದು ಎಸ್ ಪಿ ಕುಶಾಲ್ ಚೌಕ್ಸೆಯಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಮನುಷ್ಯ ಮನುಷ್ಯರ ಮದ್ಯೆ ದ್ವೇಶ ಈರ್ಶೆಗಳೆಷ್ಟಿದ್ದರೂ ಅದನ್ನ ನೇರ ನೇರ ಪೈಟ್ ಮಾಡಿಕೊಳ್ಳಲಿ ಅದರ ಬದಲಿಗೆ ಪ್ರಕೃತಿ ಸೌಂದರ್ಯದ ಮೇಲೆ ದೌರ್ಜನ್ಯ ತೋರುವ ಮೂಲಕ ರೋಷಾವೇಶ ತೋರ್ಪಡಿಸಿಕೊಳ್ಳೋದು ಎಷ್ಟು ಸರಿ ಎಂದು ಅಕ್ಕ ಪಕ್ಕದ ರೈತರು ಪ್ರಶ್ನಿಸಿದ್ದಾರೆ.