Astrology: ಭಾನುವಾರ, ಏಪ್ರಿಲ್ 27, 2025, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ಈ ರಾಶಿಯ ಜನರು ನಿಮ್ಮ ಕೆಲಸದ ಬಗ್ಗೆ ನಿಷ್ಠೆಯಿಂದಿರಿ. ಅದರಲ್ಲೂ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾವಹಿಸಿ.ಈ ದಿನವು ತೈಲ ಸಂಬಂಧಿತ ವ್ಯಾಪಾರಿಗಳಿಗೆ ಒಳ್ಳೆಯದು. ಆದಾಗ್ಯೂ, ಶಾಖದ ಬಗ್ಗೆ ಎಚ್ಚರದಿಂದಿರಿ. (ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಅನಾವಶ್ಯಕ ಕೋಪ ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ.ಇದರಿಂದ ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಭಾರೀ ನಷ್ಟವಾಗುವ ಸಾಧ್ಯತೆ ಇದೆ.ದೈಹಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ.ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ. (ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ತಪ್ಪು ನಿರ್ಧಾರ ಕೈಗೊಳ್ಳುವಂತೆ ಮಾಡಬಹುದು. ತುಂಬಾ ಶಿಸ್ತುಬದ್ಧವಾದ ವಾತಾವರಣ ಉಸಿರು ಗಟ್ಟಿಸುತ್ತದೆ. ಹಾಗಾಗಿ ಮನೆಯ ವಾತಾವರಣ ತಿಳಿಯಾಗಿ ರುವುವಂತೆ ನೋಡಿಕೊಳ್ಳಿ. ಇದಲ್ಲದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. (ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕಟಕ ರಾಶಿ: ಆಗಬೇಕಾದ ಸಮಯಕ್ಕೆ ಎಲ್ಲವೂ ಆಗೇ ಆಗುತ್ತದೆ. ನಿಮ್ಮ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಬೇರೆಯವರನ್ನು ದೂಷಿಸದಿರಿ.
ವ್ಯಾಪಾರ ವ್ಯವಹಾರಗಳಲ್ಲಿ
ಜಾಗ್ರತೆ ವಹಿಸಿ. (ಭಕ್ತಿಯಿಂದ ಶ್ರೀ ನಾಗದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)
ಸಿಂಹ ರಾಶಿ: ನೀವು ಭವಿಷ್ಯದ ಬಗ್ಗೆ ಚಿಂತಿಸುತ್ತಾ ವರ್ತಮಾನದ ಖುಷಿಯನ್ನು ಕಳೆದುಕೊಳ್ಳ ಬೇಡಿ.ಯಾವುದೇ ಸ್ವಯಂ ಉದ್ಯೋಗ ಮಾಡುವವರಿಗೆ ಈ ದಿನ ತುಂಬಾ ಶುಭ. ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವ ಅವಕಾಶಗಳಿವೆ. (ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕನ್ಯಾ ರಾಶಿ: ನಿಮ್ಮ ಬಹುದಿನದ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ. ನಿಮ್ಮ ಮನಸ್ಸು ಉತ್ಸಾಹದಿಂದ ಕೂಡಿರುತ್ತದೆ. ಈ ರಾಶಿಯವರಿಗೆ ಇಂದು ದಿಢೀರ್ ಲಾಭ ಸಾಧ್ಯತೆಯೂ ಇದೆ.ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ,ಯೋಗ
ಮಾಡುವುದನ್ನು ತಪ್ಪಿಸಬೇಡಿ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)
ತುಲಾ ರಾಶಿ: ಈ ರಾಶಿಯವರು ಸುಮ್ಮನೆ ಕುಳಿತು ಬೇಡದ್ದನ್ನು ಯೋಚಿಸುವ ಬದಲಿಗೆ ನಿಮ್ಮ ಮನಸ್ಸು ಚಟುವಟಿಕೆಯಿಂದ ಇರುವಂತೆ ಕೆಲಸದಲ್ಲಿ ನಿಮ್ಮನ್ನು
ನೀವು ತೊಡಗಿಸಿಕೊಳ್ಳಿ. ಇದರಿಂದ ಅನಾವಶ್ಯಕ ಚಿಂತೆಯಿಂದ ದೂರ ಉಳಿಯಬಹುದು. ನಿಮ್ಮ ಪೋಷಕರ ಸೇವೆ ಮಾಡುವುದು ಶ್ರೇಯಸ್ಕರ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಶ್ಚಿಕ ರಾಶಿ: ಸಣ್ಣ-ಪುಟ್ಟ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ಕುಟುಂಬ ಸದಸ್ಯರಿಂದ ಶು ಸುದ್ದಿ ಸಿಗಲಿದೆ. ಆರೋಗ್ಯದಲ್ಲಿಂದು ವ್ಯತ್ಯಾಸವಾಗುವ ಸಾಧ್ಯತೆ ಹೆಚ್ಚು ಜೋಪಾನ. (ಭಕ್ತಿಯಿಂದ ಶ್ರೀ ಮೂಕಾಂಬಿಕಾ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಧನಸ್ಸು ರಾಶಿ: ನಿಗದಿತ ಗುರಿಯನ್ನು ಮುಟ್ಟಲು ಏಕಾಗ್ರತೆಯಿಂದ ಕೆಲಸ ಮಾಡಿ. ಆಗಷ್ಟೇ ಯಶಸ್ಸು ಕೈ ಹಿಡಿಯಲಿದೆ. ಯುವಕರು ಯಾವುದೇ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿರಾಶೆಗೊಳ್ಳಬೇಡಿ. ಮರಳಿ ಯತ್ನವ ಮಾಡು… ಮರಳಿ ಯತ್ನವ ಮಾಡು… ಎಂಬಂತೆ ನಿಷ್ಠೆಯಿಂದ ನಿಮ್ಮ ಪ್ರಯತ್ನ ಮುಂದುವರೆಸಿ, ಒಳ್ಳೆಯದಾಗಲಿದೆ. (ಭಕ್ತಿಯಿಂದ ಶ್ರೀ ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಕರ ರಾಶಿ: ಈ ರಾಶಿಯ ಜನರು ಮಾತಿನ ಬಗ್ಗೆ ನಿಗಾವಹಿಸಿ. ಮಾತು ಆಡಿದರೆ ಹೋಯಿತು, ಮುತ್ತು ಹೊಡೆದರೆ ಹೋಯಿತು ಎಂಬ ನಾಣ್ನುಡಿಯಂತೆ ಯೋಚಿಸದೆ ಮಾತನಾಡಿ ವಿವಾದಕ್ಕೆ ಕಾರಣರಾಗಬೇಡಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಿ. (ಭಕ್ತಿಯಿಂದ ಶ್ರೀ ಗ್ರಾಮದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕುಂಭ ರಾಶಿ: ಈ ರಾಶಿಯವರಿಗೆ ಕಚೇರಿಯಲ್ಲಿ ಕೆಲಸ ಹೆಚ್ಚಾಗಲಿದೆ. ಆದರೆ, ಇದನ್ನು ಹೊರೆ ಎಂದು ಭಾವಿಸದೆ ಜವಾಬ್ದಾರಿಯಿಂದ ನಿರ್ವಹಿಸಿ, ಇದರಿಂದ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಇದು ನಿಮ್ಮ ಬಡ್ತಿಗೂ ಸಹಾಯಕ ವಾಗಬಹುದು. (ಭಕ್ತಿಯಿಂದ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ಈ ರಾಶಿಯವರು ಚಿಂತಿಸದೆ ತಾಳ್ಮೆಯಿಂದ ಕೆಲಸ ಮಾಡಿದರೆ ನಿಮ್ಮ ಕೆಲಸ ಸುಲಭವಾಗಿ ಮುಗಿಯಲಿದೆ. ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಬೇಡಿ. ನಿಮ್ಮ ಕ್ರೆಡಿಟ್ ಮತ್ತೊಬ್ಬರಿಗೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ಜಾಗರೂಕರಾಗಿರಿ. (ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ರಾಹುಕಾಲ: 04:30 ರಿಂದ 06:00
ಗುಳಿಕಕಾಲ: 03:00 ರಿಂದ 04:30
ಯಮಗಂಡಕಾಲ: 12:00 ರಿಂದ 01:30