ಸುಹಾಸ್ ಶೆಟ್ಟಿ ಹತ್ಯೆ: ಬಿಜೆಪಿಯವರು ಬೆಂಕಿ ಹಚ್ಚಬೇಡಿ – ಸಚಿವ ದಿನೇಶ್ ಗುಂಡೂರಾವ್ ಮನವಿ

BJP members should not set fire - Minister Dinesh Gundu Rao

ಬೆಂಗಳೂರು: ಮಂಗಳೂರಿನಲ್ಲಿ ಕಳೆದ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಕುರಿತು ಬಿಜೆಪಿಯವರು ದಯವಿಟ್ಟು ಈ ವಿಚಾರದಲ್ಲಿ ಬೆಂಕಿ ಹಚ್ಚಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತಾನಾಡಿದ ಅವರು ಸುಹಾಸ್ ಶೆಟ್ಟಿ ಕೊಲೆ ಆಗಿರುವುದು ಎಲ್ಲರಿಗೂ ಅಘಾತವಾಗಿದೆ. ಇದು ದುರ್ಘಟನೆಯಾಗಿದ್ದು, ನಮ್ಮ ಪೊಲೀಸರು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ.

ಜಿಲ್ಲೆಯಲ್ಲಿ ಕೋಮಿನ ವಿಷ ಬೀಜ ಹೋಗಲಾಡಿಸಲು ಎಲ್ಲರೂ ಪ್ರಯತ್ನ ಮಾಡಬೇಕು. ಪ್ರಚೋದನಕಾರಿ ಮಾತು ಆಡುವ ಮೂಲಕ, ದ್ವೇಷವನ್ನು ಹೆಚ್ಚಿಸುವ ಮೂಲಕ ಇದಕ್ಕೆ ಕೊನೆಯಿಲ್ಲ. ನಮಗೆ ಶಾಂತಿ, ನೆಮ್ಮದಿ ಸ್ಥಾಪನೆಯಾಗಬೇಕು ಎಂದಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲತಾಣದ ಮೂಲಕ, ಮಂಗಳೂರಿನ ಬಜಪೆಯಲ್ಲಿ‌ ನಡೆದ ಸುಹಾಸ್ ಶೆಟ್ಟಿ ಕೊಲೆ‌‌ ಕೃತ್ಯ ಅತ್ಯಂತ ಭೀಭತ್ಸ್ಯ ಮತ್ತು ಆಘಾತಕಾರಿ.‌ ಈ ಘಟನೆಯಿಂದ ವೈಯಕ್ತಿಕವಾಗಿ ನಾನು ವಿಚಲಿತನಾಗಿದ್ದೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮೇಲ್ನೋಟಕ್ಕೆ ‌ಈ ಕೃತ್ಯ ಹಳೆ ದ್ವೇಷಕ್ಕೆ ನಡೆದಂತೆ ಕಂಡು ಬಂದರೂ ಇದರ ಹಿಂದಿನ ಉದ್ದೇಶ ಕರಾವಳಿಯಲ್ಲಿ ಶಾಂತಿ ಭಂಗ ಮಾಡುವಂತಿದೆ. ಹಾಗಾಗಿ ಈ ಕೃತ್ಯ ಎಸಗಿದ ಕ್ರಿಮಿಗಳ ವಿರುದ್ಧ ಸರ್ಕಾರ ಸೂಕ್ತ ಸಂದರ್ಭದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ.

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ ಯಾರ ಓಲೈಕೆಯೂ ಇಲ್ಲ., ಯಾರ ತುಷ್ಠೀಕರಣವೂ ಇಲ್ಲ. ಈಗಾಗಲೇ ಈ ಕೃತ್ಯದ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಹತ್ಯೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ‌ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದೇನೆ.

ಬಿಜೆಪಿಯವರು ಈಗಾಗಲೇ ಸುಹಾಸ್ ಪ್ರಕರಣವನ್ನು ರಾಜಕೀಯ ‌ಮಾಡಲು ಹೊರಟಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿರುವ ಬಿಜೆಪಿಯವರಿಗೆ ಒಂದು ಮಾತು. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿಮ್ಮದು ಕೂಡ ಇದೆ.

ದ್ವೇಷ ಹರಡುವ ಮೂಲಕ‌, ಪ್ರಚೋದಿಸುವ ಮೂಲಕ‌ ಮಂಗಳೂರಿನಲ್ಲಿ ಶಾಂತಿ ಭಂಗ‌ ಮಾಡುವ ದುಷ್ಟ ಕೆಲಸಕ್ಕೆ ಕೈ ಹಾಕಬೇಡಿ‌. ನಿಮ್ಮ‌ ಹೊಲಸು ರಾಜಕಾರಣಕ್ಕೆ‌ ಮಂಗಳೂರಿನ‌ ಜನರ ನೆಮ್ಮದಿ ಹಾಳು ಮಾಡಬೇಡಿ‌. ಜವಾಬ್ದಾರಿಯಿಂದ ವರ್ತಿಸಿ.

ಕೊಲೆಯಾದ ಸುಹಾಸ್ ಕುಟುಂಬಕ್ಕೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. ನಾವು‌ ಕೇವಲ ಬಾಯಿ‌ ಮಾತಿನಲ್ಲಿ ಕಠಿಣ ಕ್ರಮದ ಭರವಸೆ ನೀಡುವವರಲ್ಲ. ಬದಲಿಗೆ ಕಾನೂನಿನ ಅನುಸಾರ ಈ ಕೃತ್ಯ ಎಸಗಿದವರಿಗೆ ತಕ್ಕ‌‌ ಪಾಠ ಕಲಿಸುವವರು. ಇದು ನಿಶ್ಚಿತ.

ಅಂತಿಮವಾಗಿ ಭೀಕರ ಕೃತ್ಯದಲ್ಲಿ‌ ಜೀವ ಕಳೆದುಕೊಂಡ ಸುಹಾಸ್ ಶೆಟ್ಟಿ ಆತ್ಮಕ್ಕೆ ಶಾಂತಿ ಬೇಡುತ್ತೇನೆ. ಸುಹಾಸ್ ಅಗಲಿಕೆಯ ನೋವಿನಿಂದ ಬಳಲುತ್ತಿರುವ ಅವರ ಕುಟುಂಬಕ್ಕೆ ನನ್ನ ಕಡೆಯಿಂದ ಮನಃಪೂರ್ವಕ ಸಾಂತ್ವಾನಗಳು ಎಂದಿದ್ದಾರೆ.

ರಾಜಕೀಯ

LPG ಸಮಸ್ಯೆಯನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸಿದೆ; ಪ್ರಲ್ಹಾದ್ ಜೋಶಿ

LPG ಸಮಸ್ಯೆಯನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸಿದೆ; ಪ್ರಲ್ಹಾದ್ ಜೋಶಿ

ಅಮೆರಿಕ ಮತ್ತು ಇಸ್ರೇಲ್ ಜತೆಗೂಡಿ ಇರಾನ್ ವಿರುದ್ದ ನಡೆಸುತ್ತಿರುವ ಯುದ್ಧ ಸೋಮವಾರ 38ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧದ ಕಾರಣವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದರಿಂದ ನೈಸರ್ಗಿಕ ಅನಿಲ ಮತ್ತು ಎಲ್‌ಪಿಜಿ (LPG) ಪೂರೈಕೆ

[ccc_my_favorite_select_button post_id="120766"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆ (Marriage) ಮಾಡಿಲ್ಲವೆಂದು ಜಗಳ ತಗೆದ ಮಗ (Son) ಸ್ವಂತ ತಾಯಿಯನ್ನೇ (Mother) ಹೊಡೆದು ಕೊಂದಿರುವ (Murder) ಘಟನೆ ವರದಿಯಾಗಿದೆ.

[ccc_my_favorite_select_button post_id="120643"]
ಡಿವೈಡರ್‌ಗೆ ಡಿಕ್ಕಿ.. ಕಾರು ಪಲ್ಟಿ: ಬಾಲಕಿ ಸಾವು

ಡಿವೈಡರ್‌ಗೆ ಡಿಕ್ಕಿ.. ಕಾರು ಪಲ್ಟಿ: ಬಾಲಕಿ ಸಾವು

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ (Accident) ಪಲ್ಟಿಯಾದ ಪರಿಣಾಮ 9 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ.

[ccc_my_favorite_select_button post_id="120735"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]