ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಕೆರೆಗಳಲ್ಲಿ ಬೋಟಿಂಗ್ ಹಾಗೂ ಜಲ ಸಾಹಸ ಕ್ರೀಡೆಗಳನ್ನು (Boating and water adventure sports) ಆಯೋಜಿಸಲಾಗುತ್ತಿದೆ.
ಪ್ರವಾಸೋದ್ಯಮ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲಿ ಬೋಟಿಂಗ್ ನಡೆಸಲು ಹಾಗೂ ಜಲ ಸಾಹಸ ಕ್ರೀಡೆಗಳನ್ನು ಕೈಗೊಳ್ಳಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 11 ಕೆರೆಗಳನ್ನು ಗುರುತಿಸಿ ಜಲ ಕ್ರೀಡೆ ಹಾಗೂ ಬೋಟಿಂಗ್ ಚಟುವಟಿಕೆಗಳನ್ನು ಕೈಗೊಳ್ಳಲು 11 ತಿಂಗಳ ಅವಧಿಗೆ ತಾತ್ವಿಕ ಅನುಮೋದನೆಯನ್ನು ನೀಡಿರುತ್ತಾರೆ.
ದೇವನಹಳ್ಳಿ: ತಟ್ಟೆಮಾಚನಹಳ್ಳಿ ಕೆರೆ, ಬೂದಿಗೆರೆ ಅಮಾನಿಕೆರೆ, ಬೆಟ್ಟ ಕೋಟೆ ಅಮಾನಿಕೆರೆ, ಆವತಿ ಕೆರೆ, ದೊಡ್ಡಸಣ್ಣೆ ಕೆರೆ.
ದೊಡ್ಡಬಳ್ಳಾಪುರ: ನಗರ ಕೆರೆ, ಗುಂಡಮಗೆರೆ ಕೆರೆ, ಮಧುರೆ ಅಮಾನಿಕೆರೆ, ಗುಂಜೂರು ಕೆರೆ.
ಹೊಸಕೋಟೆ: ದೊಡ್ಡ ಅಮಾನಿಕೆರೆ.
ನೆಲಮಂಗಲ: ಹಳೆನಿಜಗಲ್ ಕೆರೆ.
ಸಭೆ ನಾಳೆ
ಈ ಕೆರೆಗಳಲ್ಲಿ ಬೋಂಟಿಂಗ್ ಹಾಗೂ ಜಲ ಸಾಹಸ ಕ್ರೀಡೆಗಳನ್ನು ಕೈಗೊಳ್ಳವ ಕುರಿತು ಚರ್ಚಿಸಲು ನಾಳೆ (ಮೇ. ?14) ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ ಇವರ ಉಪಸ್ಥಿತಿಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಭೆಯನ್ನು ಸಭೆ ಕರೆಯಲಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)