ವಿಜಯವಾಡ; ದ್ವಿಚಕ್ರ ವಾಹನ (scooter) ಸವಾರನೋರ್ವ ಕಂಠಪೂರ್ತಿ ಕುಡಿದು ಬೈಕ್ ಜೊತೆ ರಸ್ತೆಯಲ್ಲೇ ಮಲಗಿರುವ ಘಟನೆ ಆಂಧ್ರಪ್ರದೇಶ ವಿಜಯವಾಡದ ಶ್ರೀನಗರ ಕಾಲೋನಿಯಲ್ಲಿ ನಡೆದಿದೆ.
ಅತಿಯಾದ ಮದ್ಯದ ಅಮಲಿನಲ್ಲಿ ಸ್ಕೂಟರ್ ಓಡಿಸಲಾಗದೇ ರಸ್ತೆಯಲ್ಲೇ ಸ್ಕೂಟರ್ ನಿಲ್ಲಿಸಿ ನಿದ್ರೆಗೆ ಜಾರಿದವನು ಮಧು ಬಾಬು ಎಂದು ತಿಳಿದು ಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ರೀತಿ ರಸ್ತೆ ನಂದೇ ಅಂತಾ ಕುಡುಕ ನಿದ್ದೆ ಮಾಡುತ್ತಿದ್ದರೂ ಇತರರಿಗೆ ಸಮಸ್ಯೆ ಆಗಲ್ವಾ? ಟ್ರಾಫಿಕ್ ಪೊಲೀಸರು ಎಲ್ಲಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಈ ವಿಡಿಯೋ ಆಡಳಿತಾರೂಢ ಟಿಡಿಪಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ರಾಜಕೀಯ ಸಮರಕ್ಕೂ ಕಾರಣವಾಗಿದ್ದು, ಆಂಧ್ರಪ್ರದೇಶದಲ್ಲಿ ಕಳಪೆ ಗುಣಮಟ್ಟದ ಮದ್ಯದ ಪರಿಣಾಮ ಹೀಗಾಗಿದೆ ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡಿದರೆ..
ಯಾವ್ದೇ ಒಳ್ಳೆ ಬ್ರಾಂಡ್ ಫುಲ್ ಕುಡಿದ್ರೂ ಹೀಗೆ ಆಗೋದು ಅಂತ ತಿರುಗೇಟು ನೀಡುತ್ತಿದ್ದಾರೆ.