Harithalekhani: ವಿಜಯನಗರ ಸಾಮ್ರಾಜ್ಯದ ಸಿಂಹಾಸನಾರೂಢ ಸಾಮ್ರಾಟನಾದ ಕೃಷ್ಣದೇವರಾಯ ನರಸನಾಯಕನ 1509 ರಿಂದ 1529ರ ವರೆಗೆ ಸರ್ವೋತ್ಕೃಷ್ಟ ರಾಜ್ಯಾಡಳಿತವನ್ನು ನಡೆಸಿದರು. ಎಲ್ಲ ಇತಿಹಾಸಕಾರರು ಅವನನ್ನು ’ಓರ್ವ ಮಹಾನ ರಾಜ’ ಎಂದು ಸಂಬೋಧಿಸಿ ಪ್ರಶಂಸಿಸಿದ್ದಾರೆ. ಪ್ರತಿಯೊಂದು ವಿಭಾಗದ ಮೇಲೆ ಅವನ ಗಮನವಿತ್ತು.
ಅವರ ರಾಜ್ಯಾಡಳಿತದಲ್ಲಿ ಪ್ರಜೆಗಳಿಗೆ ನ್ಯಾಯ ದೊರೆಯುತ್ತಿತ್ತು. ಪ್ರಜೆಯು ಸಮೃದ್ಧವಾಗಿತ್ತು. ಮಧ್ಯಯುಗದಲ್ಲಿ ಅವನು ದಕ್ಷಿಣ ಭಾರತವನ್ನು ಐಶ್ವರ್ಯವಂತಗೊಳಿಸಿದರು. ಆಗ ದಕ್ಷಿಣ ಭಾರತವು ಭೌತಿಕ ದೃಷ್ಟಿಯಿಂದ ಮಾತ್ರವಲ್ಲ, ಸಾಂಸ್ಕೃತಿಕ ದೃಷ್ಟಿಯಿಂದಲೂ ಕಲಶದಂತಿತ್ತು. ಅವರು ಸ್ವತಃ ಮಹಾಪರಾಕ್ರಮಿ, ಕುಶಾಗ್ರ ಸೇನಾಪತಿ ಹಾಗೂ ಮಹಾನ ಯೋಧನಾಗಿದ್ದರು. ಅವನರು ಎಲ್ಲೆಡೆ ವಿಜಯಗಳಿಸಿದರು. ಅವರಿಗೆ ಸೋಲೆಂಬುದೇ ತಿಳಿದಿರಲಿಲ್ಲ.
ವಾನ್ಗ್ಮಯದಲ್ಲಿ ಅವರ ಅಭಿರುಚಿಯು ಎಷ್ಟು ಅಪೂರ್ವವಾಗಿತ್ತೆಂದರೆ ಪ್ರಜೆಯು ಅವತನ್ನು ‘ಅಭಿನವ ಭೋಜ’ ಎಂದು ಕರೆಯುತ್ತಿತ್ತು. ಅವರ ’ಅಮುಕ್ತಮಲ್ಯದಾ’ ಈ ತೆಲುಗು ಗ್ರಂಥ ಹಾಗೂ ಸಂಸ್ಕೃತ ನಾಟಕವು ಇಂದಿಗೂ ಪ್ರಖ್ಯಾತವಾಗಿದೆ. ಅವನು ತೆಲುಗು, ಕನ್ನಡ ಹಾಗೂ ತಮಿಳು ಭಾಷೆಗಳಕವಿ ಹಾಗೂ ವಿದ್ವಾಂಸರಿಗೆ ಆಶ್ರಯದಾತನಾಗಿದ್ದರು.
ಅವರು ಕೊಡುಗೈ ದಾನಿಯಾಗಿದ್ದರು. ಅಲ್ಲದೆ ತಿರುಪತಿ ವೆಂಕಟರಮಣನ ಅನನ್ಯ ಭಕ್ತನಾಗಿದ್ದರು. ಇಂದಿಗೂ ತಿರುಪತಿ ಮಂದಿರದಲ್ಲಿ ’ಕೃಷ್ಣದೇವರಾಯನು ತನ್ನ ಇಬ್ಬರು ರಾಣಿಯರೊಂದಿಗೆ ಕೈಮುಗಿದು ನಿಂತಿರುವ’ ಶಿಲ್ಪವು ಕಂಡುಬರುತ್ತದೆ.
ವಿದ್ಯಾಸಂಪನ್ನ, ಕವಿ ಹಾಗೂ ಸಾವಿರಾರು ಪಂಡಿತರ ಆಶ್ರಯದಾತನಾದ ಹಿಂದೂರಾಜ ! : ನಮ್ಮ ಹಿರಿಯ ಪರಂಪರೆಯ ಹಾಗೂ ಕವಿಸಾಮ್ರಾಟನಾದ ಕೃಷ್ಣದೇವರಾಯನು ವಿದ್ಯಾಸಂಪನ್ನ ಹಾಗೂ ಸಾವಿರಾರು ಪಂಡಿತರಿಗೆ ಆಶ್ರಯದಾತನಾಗಿದ್ದನು. ಪಾಶ್ಚಾತ್ಯ ಇತಿಹಾಸಕಾರನಾದ ದೊಮಿಂಗೋ ಪೇಸನು ’ಕೃಷ್ಣದೇವರಾಯನು ಓರ್ವ ಕ್ಷಮಾಶೀಲ, ಪರೋಪಕಾರಿ, ಕೃಪಾಳು ರಾಜನಾಗಿದ್ದನು.
ಅವರು ಮಹಾಪರಾಕೃಮಿ ಯೋಧ, ಓರ್ವ ಕಾರ್ಯಕ್ಷಮ ರಾಜಕಾರಣಿ, ಅಂತೆಯೇ ಕಲೆ ಹಾಗೂ ಸಾಹಿತ್ಯದ ಆಶ್ರಯದಾತನಾಗಿದ್ದನು. ಈ ಎಲ್ಲವುಗಳ ಮೇಲೆ ಮೇರುಮಣಿ ಎಂಬಂತೆ ಭಾರತವು ಆಧ್ಯಾತ್ಮಿಕ ಮೌಲ್ಯಗಳ ಆಗರವಾಗಿದೆ. ರಾಜನು ಈ ಮೌಲ್ಯಗಳ ಸಂವರ್ಧನೆ ಹಾಗೂ ವೃದ್ಧಿಗಾಗಿ ಅವಿರತವಾಗಿ ಪ್ರಯತ್ನಶೀಲನಾಗಿದ್ದನು.
ಕೃಪೆ: ಗುರುದೇವ ಡಾ.ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ), ಹಿಂದೂ ಜಾಗೃತಿ.