ದಾವಣಗೆರೆ: ಆನ್ ಲೈನ್ ಗೇಮ್ ಆಡಿ ಬರೋಬ್ಬರಿ 18 ಲಕ್ಷ ರೂ.ಹಣ ಕಳೆದುಕೊಂಡ ಯುವಕನೋರ್ವ ಸೆಲ್ಪಿ ವೀಡಿಯೊ ಮಾಡಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸರಸ್ವತಿ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವನನ್ನು 25 ವರ್ಷದ ಶಶಿ ಕುಮಾರ್ ಎಂದು ಗುರುತಿಸಲಾಗಿದೆ.
ನಷ್ಟ ಅನುಭವಿಸಿದ ಬಳಿಕ ಆನ್ ಲೈನ್ ಗೇಮ್ ನಿಷೇಧ ಮಾಡುವಂತೆ ಪ್ರಧಾನಿ, ಮುಖ್ಯಮಂತ್ರಿ, ಸಂಸದೆ, ಡಿಸಿ, ಎಸ್ ಪಿ ಸೇರಿ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದನಂತೆ.
ಆದರೆ ಯಾವುದೇ ಕ್ರಮವಾಗದ ಹಿನ್ನಲೆ ಸೆಲ್ಫಿ ವೀಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದಿದೆ.
ಡೆತ್ ನೋಟ್ ಬರೆದಿದ್ದು, ಆನ್ ಲೈನ್ ಗೇಮ್ ನ ಅಕ್ರಮದ ಬಗ್ಗೆ ಹೇಳಿಕೊಂಡಿದ್ದಾನೆ.
ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವುದು ಕಡಿಮೆಯಾಗಲಿ ಎಂದು ವೀಡಿಯೊದಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.