ನವದೆಹಲಿ: ಭಾರತೀಯ ವಾಯುಪಡೆಯು ಅಗ್ನಿವೀರರ (Agniveer) ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದ್ದು, ಆನ್ಸೆನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಜುಲೈ 31 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 25ರಿಂದ ಆನ್‌ಲೈನ್ ಪರೀಕ್ಷೆಗಳು ಸೇರಿದಂತೆ ವಿವಿಧ ನೇಮಕ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ವಾಯುಪಡೆಯು ತಿಳಿಸಿದೆ.
ಮಾನದಂಡಗಳು: ಅಭ್ಯರ್ಥಿಗಳ ಕನಿಷ್ಠ ಎತ್ತರ 152.5 ಸೆಂ. ಮೀ. ಎದೆಯ ಸುತ್ತಳತೆ 77 ಸೆಂ.ಮಿ ಇರಬೇಕು. ವಯೋಮಿತಿ: ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 2, 2005ರಿಂದ ಜನವರಿ 2, 2009ರ ನಡುವೆ ಜನಿಸಿರಬೇಕು, ಅರ್ಜಿದಾರರ ಕನಿಷ್ಠ ವಯೋಮಿತಿ 17.5 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 21 ವರ್ಷಗಳು
ಅರ್ಜಿ ಶುಲ್ಕ: ಎಲ್ಲಾ ವರ್ಗದ ಅಭ್ಯರ್ಥಿ ಗಳೂ 550 ರೂ.. ಶುಲ್ಕ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಮತ್ತೆ ಹಿಂಪಡೆಯಲಾಗುವುದಿಲ್ಲ. ಆನ್ಲೈನ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ: ಈ ನೇಮಕಾತಿಗೆ ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿದೆ. ಮೊದಲ ಹಂತದಲ್ಲಿ, ಆನ್‌ಲೈನ್ ಪರೀಕ್ಷೆ ಇರುತ್ತದೆ. ವಿಜ್ಞಾನ ವಿಷಯದ ಪರೀಕ್ಷೆಯ ಒಟ್ಟು ಅವಧಿ 60 ನಿಮಿಷಗಳಾಗಿದ್ದು, ಇದು 10+2 ಸಿಬಿಎಸ್‌ಸಿ ಪಠ್ಯಕ್ರಮದ ಪ್ರಕಾರ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ಅನ್ನು ಒಳಗೊಂಡಿರುತ್ತದೆ. ಆದರೆ ಇತರ ವಿಷಯಗಳಿಗೆ ಪರೀಕ್ಷೆಯ ಒಟ್ಟು ಅವಧಿ 45 ನಿಮಿಷಗಳಾಗಿದ್ದು ಲಿಖಿತ ಪರೀಕ್ಷೆ.
ನಂತರ, ದೈಹಿಕ ಪರೀಕ್ಷೆ ಇರುತ್ತದೆ, ಇದರಲ್ಲಿ ಪುರುಷ ಅಭ್ಯರ್ಥಿಗಳು 7 ನಿಮಿಷಗಳಲ್ಲಿ 1.6 ಕಿ.ಮೀ. ಓಡಬೇಕು ಮತ್ತು ಮಹಿಳಾ ಅಭ್ಯರ್ಥಿಗಳು 8 ನಿಮಿಷಗಳಲ್ಲಿ 1.6 ಕಿ.ಮೀ ಓಡಬೇಕು. ಇದಲ್ಲದೆ, ಅವರು ಪುಷ್ ಅಪ್ ಗಳು, ಸಿಟಪ್‌ಗಳು ಮತ್ತು ಸ್ಮಾಟ್‌ಗಳನ್ನು ಸಹ ಮಾಡಬೇಕಾಗುತ್ತದೆ.
ಈ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ನಂತರ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ವಾಯುಪಡೆಯ ವೆಬೈಟ್ ನೋಡಬಹುದು: https://agnipathvayu.cdac.in