ದುಬೈ: ತೀವ್ರ ಆಕ್ಷೇಪದ ನಡುವೆಯೂ ನಡೆಯುತ್ತಿರುವ ಈ ಬಾರಿಯ ಏಷ್ಯಾಕಪ್ ಟಿ20 (Asia Cup T20) ಕ್ರಿಕೆಟ್ ಟೂರ್ನಿಯ ಭಾನುವಾರ ನಡೆದ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಮೆಣಿಸಿ, ಸೂಪರ್ -4 ಹಂತದಲ್ಲಿ ತನ್ನ ಶುಭಾರಂಭ ಮಾಡಿದೆ.
ಸೂಪರ್-4 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಪಾಕ್ 5 ವಿಕೆಟ್‌ಗೆ 171 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಭಾರತ, ಅಭಿಷೇಕ್ (74) ಅಬ್ಬರದ ನೆರವಿನಿಂದ 18.5 ಓವರ್ ಗಳಿಗೆ 4 ವಿಕೆಟ್‌ಗೆ 174 ರನ್ ಗಳಿಸಿತು.