ದೊಡ್ಡಬಳ್ಳಾಪುರ: ಆಕ್ಸೆಂಚರ್ (Accenture) ನೆರವಿನೊಂದಿಗೆ ಐಡಿಐಐ (Entrepreneurship Development Institute Of India) ಸಂಸ್ಥೆಯ ವತಿಯಿಂದ ಮಹಿಳೆಯರಿಗಾಗಿ (for women) 26 ದಿನಗಳ ಉಚಿತ ತರಬೇತಿ ಕಾರ್ಯಾಗಾರವನ್ನು (Free training workshop) ತಾಲೂಕಿನ ಆರೂಢಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆರೂಢಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ್, ಈ ಒಂದು ಉದ್ಯಮದಿಂದ ಮಹಿಳಾ ಸಬಲೀಕರಣದತ್ತ ಹೆಜ್ಜೆ ಹಾಕಲು ಹಾಗೂ ಬಿಡುವಿನ ಸಮಯದಲ್ಲಿ ಸ್ವಾಭಿಮಾನಿ ಉದ್ಯಮಿಗಳಾಗಿ ಪರಿವರ್ತನೆಯಾಗಲು ಮಹಿಳೆಯರಿಗೆ ಸದಾವಕಾಶ ದೊರೆಯಲಿದೆ ಎಂದರು.
ಗ್ರಾಮದ ಮುಖಂಡ ರಾಮಕೃಷ್ಣಪ್ಪ ಮಾತನಾಡಿ, ಮಹಿಳೆಯರು ಹಲವು ದಶಕಗಳ ಹಿಂದೆ ಮನೆ, ಮಕ್ಕಳು, ಕುಟುಂಬಕ್ಕೆ ಅಡುಗೆ, ಲಾಲನೆ, ಪಾಲನೆ, ಪೋಷಣೆ ಮಾತ್ರ ಸೀಮಿತವಾಗಿದ್ದರು. ಆದರೆ ಈ ಕಾಲಘಟ್ಟದಲ್ಲಿ ಮಹಿಳೆಯರ ಸ್ವಾವಲಂಬನೆಗಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ವಿಪುಲ ಅವಕಾಶವಿದೆ ಎಂದರು
ಕಾರ್ಯಾಗಾರದಲ್ಲಿ ಅರೂಢಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 55 ಮಹಿಳೆಯರು ಭಾಗವಹಿಸಿ, ಅಗರಬತ್ತಿ ತಯಾರಿಕೆ (Agarbatti Making), ವಿವಿಧ ರೀತಿಯ ದೂಪಗಳ ತಯಾರಿಕೆ (Doopa/Cones Making), ನೈಸರ್ಗಿಕ ಪೂಜಾ ಉತ್ಪನ್ನಗಳ ತಯಾರಿಕೆ (Natural Pooja Products Making) ತರಬೇತಿ ಪಡೆಯುತ್ತಿರುವುದು ಪ್ರಶಂಸನೀಯ ಎಂದರು.

ಈ ವೇಳೆ ದೊಡ್ಡಬಳ್ಳಾಪುರ ತಾಲೂಕು ಪಂಚಾಯತಿ NRLM ಯೋಜನೆ ಸಂಸ್ಥಾಪಕಿ ಚೈತ್ರಾ, ಆರೂಢಿ ಗ್ರಾಮಪಂಚಾಯತಿ ವ್ಯಾಪ್ತಿಯ ಫೆಡರೇಶನ್ ಅಧ್ಯಕ್ಷೆ ಕೆ.ವಿಜಯಾಂಬಿಕೆ, ಮುಖ್ಯ ಪುಸ್ತಕ ಬರಹಗಾರ್ತಿ ಆಶಾ ಆರ್, ಇಡಿಐಐ ಸಂಸ್ಥೆಯ ಯೋಜನಾ ಸಂಯೋಜಕಿ ಲಲಿತಾ ಮತ್ತಿತರರಿದ್ದರು.