ದೊಡ್ಡಬಳ್ಳಾಪುರ: ತಾಲೂಕಿನ ಹೆಸರಾಂತ ಸಂಸ್ಥೆ ಹಳೇ ಬಸ್ ನಿಲ್ದಾಣದ ಬಳಿಯಿರುವ ಮಹಿಳಾ ಸಮಾಜ (Mahila Samaja) ಕಸ್ತೂರಿ ಬಾ ಶಿಶುವಿಹಾರಕ್ಕೆ 2025-28ನೇ ಸಾಲಿನ ಕಾರ್ಯಕಾರಿ ಸಮಿತಿಯ 11 ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ನಿಯಮಾನುಸಾರ ಅಧ್ಯಕ್ಷರ ಚುನಾವಣೆಗೆ ಸೂಕ್ತ ದಿನಾಂಕ ಗೊತ್ತುಪಡಿಸಿ ಆಯ್ಕೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಶಿವಕುಮಾರ್.ವಿ ತಿಳಿಸಿದ್ದಾರೆ.
ವಿಜೇತ ಅಭ್ಯರ್ಥಿಗಳು: 1. ವತ್ಸಲ ಎಂ.ಕೆ, 2. ದೇವಕಿ.ಎಲ್. ಸಿ, 3.ಕವಿತ ಕೆ.ಜೆ 4.ಕವಿತ ಬಿ.ಸಿ, 5. ನಿರ್ಮಲ ವಿ, 6. ವೀಣಾ ಎಸ್ , 7. ಗಿರಿಜ.ಬಿ.ಎ 8. ಉಮಾದೇವಿ ಎಂ, 9. ಮಮತ ಕೆ.ಎಲ್, 10. ವನಿತ ಕೆ, 11. ಕವಿತ.ಆರ್.
11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 28 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು.
ಚುನಾವಣೆಯಲ್ಲಿ ಎಂ.ಕೆ.ವತ್ಸಲ ಮತ್ತು ವಿ.ನಿರ್ಮಲ ಅವರ ತಂಡದಿಂದ 7 ಮಂದಿ ಹಾಗೂ ಕೆ.ಎಸ್.ಪ್ರಭಾ ಮತ್ತು ಎಲ್.ಸಿ.ದೇವಕಿ ತಂಡದಿಂದ 4 ಮಂದಿ ವಿಜೇತರಾಗಿದ್ದಾರೆ.
ಸ್ವತಂತ್ರ್ಯವಾಗಿ 6 ಮಂದಿ ಸ್ಪರ್ಧಿಸಿದ್ದು, ಇದರಲ್ಲಿ ಯಾರೂ ಜಯಗಳಿಸಿಲ್ಲ.
ಹೆಚ್ಚಿನ ಸ್ಥಾನಗಳನ್ನು ಪಡೆದಿರುವ ತಂಡದಿಂದ ಸಹಜವಾಗಿ ಅಧ್ಯಕ್ಷ ಗಾದಿ ಅಲಂಕರಿಸಲಿದ್ದು, ಪದಾಧಿಕಾರಿಗಳು ಯಾರಾಗಲಿದ್ದಾರೆ ಎನ್ನುವ ಕುತೂಹಲ ಸದಸ್ಯರಿಗಿದೆ.