ಬೆಂಗಳೂರು: ಗಿಳಿ (Parrot) ರಕ್ಷಿಸಲು ಹೋದ ಯುವಕನೋರ್ವ ಹೈಟೆನ್ಸನ್ ವೈರ್ ಕಂಬದ ಕರೆಂಟ್ ಶಾಕ್ ತಗುಲಿ (high-voltage wire) ಸಾವನ್ನಪ್ಪಿರುವ ಘಟನೆ ಗಿರಿನಗರದ ಅಪಾರ್ಟ್‌ಮೆಂಟ್ ಬಳಿ ನಡೆದಿದೆ.
ಮೃತ ದುರ್ದೈವಿಯನ್ನು ಅರುಣ್ ಕುಮಾರ್ (23 ವರ್ಷ) ಎಂದು ಗುರುತಿಸಲಾಗಿದೆ.
ಅಪಾರ್ಟ್‌ಮೆಂಟ್ ಒಳಗಿನ ಹೈಟೆನ್ಸನ್ ವೈರ್ ಕಂಬದ ಮೇಲೆ ಕುಳಿತಿದ್ದ ಗಿಳಿ ರಕ್ಷಿಸಲು ಹೋಗಿ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್‌ಗೆ ಕಡ್ಡಿ ಕಟ್ಟಿಕೊಂಡು ಕಂಬದ ಮೇಲೆ ಕುಳಿತಿದ್ದ ಗಿಳಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ 66 ಸಾವಿರ ಕೆವಿ ವೈರ್‌ನಿಂದ ಶಾಕ್ ತಗುಲಿದ್ದು, ಅರುಣ್ ಕೆಳ ಬಿದ್ದಿದ್ದಾರೆ.
ಕೂಡಲೇ ಸ್ಥಳೀಯರು ಅರುಣ್‌ನನ್ನು ಆಸ್ಪತ್ರೆಗೆ ರವಾನಿಸಿದ್ದು, ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಬೆಸ್ಕಾಂ, ಕೆಇಬಿ. ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸುಮಾರು 2 ಲಕ್ಷ ಗ ಬೆಲೆಬಾಳುವ ಫಾರಿನ್ ಗಿಳಿ ಎಂದು ತಿಳಿದುಬಂದಿದೆ. ಈ ಸಂಬಂಧ ಗಿರಿನಗರ ಪೊಲೀಸರು ತನಿಖೆ ನಡೆಸಿದ್ದಾರೆಂದು ವರದಿಯಾಗಿದೆ.