ದೊಡ್ಡಬಳ್ಳಾಪುರ: ಬಿಸಿಲ ಬೇಗೆಯ ನಡುವೆ ಶುಕ್ರವಾರ ಸಂಜೆ ತಾಲೂಕಿನ ಸಾಸಲು ಹೋಬಳಿಯ ವಿವಿಧೆಡೆ ಕೆಲ ಕಾಲ ಮಳೆ (Rain) ಸುರಿದು ಇಳೆ ತಂಪಾಯಿತಾದರೂ, ಧಗೆ ತೀವ್ರವಾಗಿದೆ.

ತೀವ್ರವಾದ ಗಾಳಿ, ಸಿಡಿಲಿನಿಂದ ಕೂಡಿದ ಮಳೆ ಕೆಲ ಗಂಟೆಗಳ ಕಾಲ ಸುರಿದ್ದಿದ್ದು, ಕೆಲವೆಡೆ ರಾಗಿ ಬೆಳೆ ನೆಲಕಚ್ಚಿದೆ. ಗಾಳಿ, ಮಳೆಯ ಕಾರಣ ಈ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿಪೂರ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.

ಇನ್ನೂ ಸಿಡಿಲು ಬಡಿದು ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸೊಣ್ಣೆನಹಳ್ಳಿಯ ರಾಜಪ್ಪ ಎನ್ನುವವರ ಮನೆಗೆ ಹಾನಿಯಾಗಿದೆ.
ಸೊಣ್ಣೇನಹಳ್ಳಿ ಗ್ರಾಮದ ಶನಿಮಹಾತ್ಮ ಸ್ವಾಮಿ ದೇವಾಲಯದ ಅರ್ಚಕರಾದ ರಾಜಪ್ಪ ಅವರ ಮನೆಗೆ ಶುಕ್ರವಾರ ಸಂಜೆ 7.30 ರ ವೇಳೆಗೆ ಸಿಡಿಲು ಬಡಿದಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಪಾಯ ಸಂಭವಿಸಲಿಲ್ಲವಾದರೂ, ಮನೆಗೆ ಹೊದಿಸಿದ್ದ ಸಿಮೆಂಟ್ ಶೀಟುಗಳು ಹಾಗೂ ಗೋಡೆಗೆ ಹಾನಿಯಾಗಿದೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.
2 ಪಿಯುಸಿ ರಿಸಲ್ಟ್: ಸುಮನ ಕಾಲೇಜಿಗೆ ಶೇ.100 ಫಲಿತಾಂಶ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮುಖ್ಯ ರಸ್ತೆಯ ಸಮೀಪದಲ್ಲಿರುವ ಮಾರಸಂದ್ರದ ಸುಮನ ಪದವಿ ಪೂರ್ವ ಕಾಲೇಜು 2025–2026 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಈ ಸಾಲಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ 18 ಮಂದಿ ಅತ್ಯುತ್ತಮ ಶ್ರೇಣಿಯಲ್ಲಿ (Distinction) ಹಾಗೂ 21 ಮಂದಿ ಪ್ರಥಮ ಶ್ರೇಣಿಯಲ್ಲಿ (First Class) ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗವು 100% ಫಲಿತಾಂಶವನ್ನು ದಾಖಲಿಸಿ ಅತ್ಯುತ್ತಮ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ
ಜನನಿ ವಿ – 96%, ಶ್ವೇತಾ ಕೆ ಎನ್ – 95%, ಶಶಾಂಕ್ ಸಿ – 93%, ಶ್ರೇಯಾ ಶಂಕರ್ – 93%, ಚಿರಂತನ ಆರ್ ವೈ – 92% ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಾಣಿಜ್ಯ ವಿಭಾಗವು 96% ಫಲಿತಾಂಶವನ್ನು ಸಾಧಿಸಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ
ಸಿಂದು ಎಂ – 94.5%, ಮಿರಾಜುದ್ದೀನ್ ಅನ್ಸಾರಿ – 92%, ಶ್ರೀಷಾ ಎಸ್ ಯಾರಾ – 92.5%, ದೀಪಕ್ ಜಿ – 92.4%, ಧ್ರುವ ತೇಜಸ್ – 92% ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಉತ್ತಮ ಅಂಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.