ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಫೀಡರ್ನಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಏಪ್ರಿಲ್ 12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ (Power cut).

ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯರಸ್ತೆ, ಸಂಜಯ್ ನಗರ, ಭುವನೇಶ್ವರಿನಗರ, ಚೈತನ್ಯನಗರ, ತೇರಿನಬೀದಿ, ರಂಗಪ್ಪ ಸರ್ಕಲ್, ಕೆಸಿಪಿ ಸರ್ಕಲ್, ವೀರಾಪುರ, ಗಾಂಧಿನಗರ, ಖಾಸ್ಬಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಪಿ.ವಿನಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)

ಬಿರುಗಾಳಿ ಮಿಶ್ರಿತ ಮಳೆ.. ಸಿಡಿಲು ಬಡಿದು ಮನೆಗೆ ಹಾನಿ..!

ದೊಡ್ಡಬಳ್ಳಾಪುರ: ಬಿಸಿಲ ಬೇಗೆಯ ನಡುವೆ ಶುಕ್ರವಾರ ಸಂಜೆ ತಾಲೂಕಿನ ಸಾಸಲು ವಿವಿಧೆಡೆ ಕೆಲ ಕಾಲ ಮಳೆ (Rain) ಸುರಿದು ಇಳೆ ತಂಪಾಯಿದಾರೂ, ಧಗೆ ತೀವ್ರವಾಗಿದೆ.
ತೀವ್ರವಾದ ಗಾಳಿ, ಸಿಡಿಲಿನಿಂದ ಕೂಡಿದ ಮಳೆ ಕೆಲ ಗಂಟೆಗಳ ಕಾಲ ಸುರಿದ್ದಿದ್ದು, ಕೆಲವೆಡೆ ರಾಗಿ ಬೆಳೆ ನೆಲಕಚ್ಚಿದೆ. ಗಾಳಿ ಮಳೆಯ ಕಾರಣ ಈ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿಪೂರ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.
ಇನ್ನೂ ಸಿಡಿಲು ಬಡಿದು ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸೊಣ್ಣೆನಹಳ್ಳಿಯ ರಾಜಪ್ಪ ಎನ್ನುವವರ ಮನೆಗೆ ಹಾನಿಯಾಗಿದೆ.
ಸೊಣ್ಣೇನಹಳ್ಳಿ ಗ್ರಾಮದ ಶನಿಮಹಾತ್ಮ ಸ್ವಾಮಿ ದೇವಾಲಯದ ಅರ್ಚಕರಾದ ರಾಜಪ್ಪ ಅವರ ಮನೆಗೆ ಶುಕ್ರವಾರ ಸಂಜೆ 7.30 ರ ವೇಳೆಗೆ ಸಿಡಿಲು ಬಡಿದಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಪಾಯ ಸಂಭವಿಸಲಿಲ್ಲವಾದರೂ, ಮನೆಗೆ ಹೊದಿಸಿದ್ದ ಸಿಮೆಂಟ್ ಶೀಟುಗಳು ಹಾಗೂ ಗೋಡೆಗೆ ಹಾನಿಯಾಗಿದೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.