ಬೆಂ.ಗ್ರಾ. ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಾಸಾಶನ ಪಡೆಯುತ್ತಿರುವ ಕಲಾವಿದರು (Artists), ಸಾಹಿತಿಗಳು 2026-27 ನೇ ಸಾಲಿಗೆ ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರೂ.2500/-ಗಳ ಕಲಾವಿದರ ಮಾಸಾಶನ ಮತು ರೂ. 500/-ಗಳ ವಿಧವಾ ಮಾಸಾಶನ ಪಡೆಯುತ್ತಿರುವ ಸಾಹಿತಿಗಳು/ಕಲಾವಿದರುಗಳ ಜಿಲ್ಲಾ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಬೇಕಿದೆ.

ಬಳಿಕ ಅರ್ಜಿಯೊಂದಿಗೆ ಪಿಂಚಣಿ ಪಾವತಿ (P.P.O) ಆದೇಶದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಪ.ಜಾ/ಪ.ಪಂ ಕಲಾವಿದರು ಕಡ್ಡಾಯವಾಗಿ ಆರ್.ಡಿ ಸಂಖ್ಯೆ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದಿಗೆ ಏಪ್ರಿಲ್ 30 ರೊಳಗೆ ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 ಚಪ್ಪರದಕಲ್ಲು, ಬೀರಸಂದ್ರ ಗ್ರಾಮ ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ಗುಂಡಮಗೆರೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು.!

ದೊಡ್ಡಬಳ್ಳಾಪುರ: ಬೇಸಿಗೆಯ ಧಗೆಯಿಂದ ಪಾರಾಗಲು ಕೆರೆಯಲ್ಲಿ ಈಜಾಡಲು ತೆರಳಿದ್ದ ವ್ಯಕ್ತಿಯೋರ್ವ, ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಕೆರೆಯಲ್ಲಿ (Gundamagere lake) ಭಾನುವಾರ ಸಂಭವಿಸಿದೆ.
ಮೃತ ದುರ್ದೈವಿಯನ್ನು ಬೆಂಗಳೂರಿನ ಕುರುಬರಹಳ್ಳಿ ನಿವಾಸಿ ಶ್ರೀನಿವಾಸ ಚಾರ್ (50 ವರ್ಷ) ಎಂದು ಗುರುತಿಸಲಾಗಿದೆ.
ಮೃತನು ಗುಂಡಮಗೆರೆ – ದೊಡ್ಡಬಳ್ಳಾಪುರ ನಡುವಿನ ರಸ್ತೆಯಲ್ಲಿನ ಜಮೀನು ನೋಡಲೆಂದು ಬಾಮೈದನೊಂದಿಗೆ ಬಂದಿದ್ದು, ಈ ವೇಳೆ ಗುಂಡಮಗೆರೆ ಕೆರೆ ವೀಕ್ಷಿಸಲು ತೆರಳಿದ್ದ ವೇಳೆ, ಬೆಸಿಗೆಯ ಧಗೆಯಿಂದ ಪಾರಾಗಲು ಬಾಮೈದಾ ಬೇಡವೆಂದರು ಈಜಾಡಲು ಕೆರೆಗೆ ಇಳಿದಿದ್ದು, ಈ ವೇಳೆ ನೀರಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಈ ವೇಳೆ ಬಾಮೈದಾ ಸಮೀಪದಲ್ಲಿಯೇ ಈಜಾಡುತ್ತಿದ್ದ ಯುವಕರ ನೆರವಿನೊಂದಿಗೆ ಶ್ರೀನಿವಾಸ್ ಚಾರ್ ಅವರ ರಕ್ಷಿಸಲು ನೀರಿಗೆ ಹಾರಿ, ನೀರಿಂದ ಹೊರತಂದಿದ್ದಾರೆ. ಆದರೆ ಅಷ್ಟರಲ್ಲಿ ಶ್ರೀನಿವಾಸ ಚಾರ್ ಅವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಹೊಸಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.