ಅಮರಾವತಿ: ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ರಸ್ತೆಯಲ್ಲಿ ಟ್ಯಾಂಕರ್ ಬ್ರೇಕ್ ವಿಫಲವಾಗಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲೇ ಸಾಗುತ್ತಿದ್ದ ಬಿಎಂಡಬ್ಲ್ಯು ಕಾರಿನ (BMW Car) ಮೇಲೆ ಮಗುಚಿ ಬಿದ್ದಿದೆ.

ಕಾರು ಕಂಟೇನರ್ ಟ್ಯಾಂಕರ್‌ನ ಭಾರಕ್ಕೆ ಕೆಂಪು ಬಣ್ಣದ ಬಿಎಂಡಬ್ಲ್ಯು ಸಂಪೂರ್ಣ ಅಪ್ಪಚ್ಚಿಯಾಗಿದೆ.

In #AndhraPradesh's #NTR district, a lorry carrying fly ash overturned on a #BMW car due to brake failure. The BMW, a High Court lawyer, was killed. The BMW was completely crushed in the accident. pic.twitter.com/rxuENXJ4vD
— Siraj Noorani (@sirajnoorani) April 11, 2026
ಘಟನೆಯಲ್ಲಿ ಕಾರಿನೊಳಗಿದ್ದ ಗುಂಟೂರು ಜಿಲ್ಲೆಯ ವಕೀಲ ಪಿ.ಶ್ರೀನಿವಾಸ ರಾವ್ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಟ್ಯಾಂಕರನ್ನು ಮೇಲೆತ್ತಲು ಸ್ಥಳದಲ್ಲಿ ಕ್ರೇನ್ ಲಭ್ಯವಿಲ್ಲದೇ ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆ 2 ಗಂಟೆ ವಿಳಂಬವಾಗಿದೆ. ಆ ಬಳಿಕವಷ್ಟೇ ಅಪ್ಪಚ್ಚಿಯಾಗಿದ್ದ ಕಾರಿನಿಂದ ವಕೀಲರ ಮೃತದೇಹವನ್ನು ಹೊರತೆಗೆಯಲು ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಟ್ರೋಲ್ ಪ್ಲಾಜಾ ಬಳಿಯೇ ಅಪಘಾತವಾಗಿದ್ದರಿಂದ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿದೆ.
ದೊಡ್ಡಬಳ್ಳಾಪುರ: ಗುಂಡಮಗೆರೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು.!

ದೊಡ್ಡಬಳ್ಳಾಪುರ: ಬಿಸಿಗೆಯ ಧಗೆಯಿಂದ ಪಾರಾಗಲು ಕೆರೆಯಲ್ಲಿ ಈಜಾಡಲು ತೆರಳಿದ್ದ ವ್ಯಕ್ತಿಯೋರ್ವ, ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಕೆರೆಯಲ್ಲಿ (Gundamagere lake) ಭಾನುವಾರ ಸಂಭವಿಸಿದೆ.
ಮೃತ ದುರ್ದೈವಿಯನ್ನು ಬೆಂಗಳೂರಿನ ಕುರುಬರಹಳ್ಳಿ ನಿವಾಸಿ ಶ್ರೀನಿವಾಸ ಚಾರ್ (50 ವರ್ಷ) ಎಂದು ಗುರುತಿಸಲಾಗಿದೆ.
ಮೃತನು ಗುಂಡಮಗೆರೆ – ದೊಡ್ಡಬಳ್ಳಾಪುರ ನಡುವಿನ ರಸ್ತೆಯಲ್ಲಿನ ಜಮೀನು ನೋಡಲೆಂದು ಬಾಮೈದನೊಂದಿಗೆ ಬಂದಿದ್ದು, ಈ ವೇಳೆ ಗುಂಡಮಗೆರೆ ಕೆರೆ ವೀಕ್ಷಿಸಲು ತೆರಳಿದ್ದ ವೇಳೆ, ಬೆಸಿಗೆಯ ಧಗೆಯಿಂದ ಪಾರಾಗಲು ಬಾಮೈದಾ ಬೇಡವೆಂದರು ಈಜಾಡಲು ಕೆರೆಗೆ ಇಳಿದಿದ್ದು, ಈ ವೇಳೆ ನೀರಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಈ ವೇಳೆ ಬಾಮೈದಾ ಸಮೀಪದಲ್ಲಿಯೇ ಈಜಾಡುತ್ತಿದ್ದ ಯುವಕರ ನೆರವಿನೊಂದಿಗೆ ಶ್ರೀನಿವಾಸ್ ಚಾರ್ ಅವರ ರಕ್ಷಿಸಲು ನೀರಿಗೆ ಹಾರಿ, ನೀರಿಂದ ಹೊರತಂದಿದ್ದಾರೆ. ಆದರೆ ಅಷ್ಟರಲ್ಲಿ ಶ್ರೀನಿವಾಸ ಚಾರ್ ಅವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಹೊಸಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.