ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯಸ್ವಾಮಿ (Shri Ghati Subrahmanya) ತೆಪೋತ್ಸವ ಭಾನುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ತುಳು ಷಷ್ಠಿಯಂದು ರಥೋತ್ಸವ ಮುಗಿದ ಒಂದು ತಿಂಗಳಿಗೆ ಬರುವ ಮಾಘ ಶುದ್ಧ ಪಂಚಮಿಯಂದು ತೆಪ್ಪೋತ್ಸವ ನಡೆಯಿತು.
ದೇವಾಲಯ ಸಮೀಪದ ಕಲ್ಯಾಣಿಯಲ್ಲಿ ಜಗಮಗಿಸುವ ವಿದ್ಯುತ್ ಹಾಗೂ ಹೂವಿನ ಅಲಂಕೃತ ತೆಪ್ಪದಲ್ಲಿ ಸುಬ್ರಹ್ಮಣ್ಯಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ತೆಪ್ಪದ ಮೇಲೆ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು.
ತೆಪ್ಪೋತ್ಸವದ ಹಿನ್ನೆಲೆಯಲ್ಲಿ ಕಲ್ಯಾಣಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ತೆಪ್ಪೋತ್ಸವ ಪ್ರಯುಕ್ತ ಭರತ ನಾಟ್ಯ, ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು. ತೆಪೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.