ಬೆಂಗಳೂರು: ಮಾರುಕಟ್ಟೆಯಲ್ಲಿ 10ಗ್ರಾಂ ಚಿನ್ನದ ಬೆಲೆ (Gold price) ರೂ 1 ಲಕ್ಷ ದಾಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.
ಕಳೆದ ಕೆಲ ವಾರಗಳಿಂದ ಸ್ವಲ್ಪ ಸ್ವಲ್ಪವೇ ಹೆಚ್ಚಳವಾಗಿ, ಮಂಗಳವಾರ 24 ಕ್ಯಾರೆಟ್ (99.9 ಶುದ್ಧತೆ) ಚಿನ್ನದ ಬೆಲೆ ಒಂದು ಗ್ರಾಂಗೆ 10,030 ರೂಗಳಿಗೆ ತಲುಪಿದ್ದು, 10 ಗ್ರಾಂಗೆ 1,00,300 ರೂಗಳಿಗೆ ಏರಿಕೆಯಾಗಿದೆ.
ಭಾರತದಲ್ಲಿ ಚಿನ್ನದ ದರ ರೂ.1ಲಕ್ಷ ದಾಟಿರುವುದು ಇದೇ ಮೊದಲಾಗಿದ್ದು, ಬಡವರು, ಮಧ್ಯಮವರ್ಗದ ಜನತೆಗೆ ಚಿನ್ನ ಕೈಗೆ ಎಟುಕದಂತಾಗಿದೆ.