ಚೆನೈ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿ, ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದ ತಮಿಳುನಾಡಿನಲ್ಲಿ ಈಗ ಪುರುಷರಿಗೂ ಉಚಿತ ಬಸ್ ಪ್ರಯಾಣದ ಭರವಸೆಯನ್ನು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಘೋಷಿಸಿದೆ.
ಹೌದು ತಮಿಳುನಾಡಿನಲ್ಲಿ ಮುಂಬರುವ 17ನೇ ವಿಧಾನಸಭೆ ಚುನಾವಣೆಗೆಯ ಕಾವು ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ಯೋಜನೆಗಳ ಭರವಸೆಗಳನ್ನು ಘೋಷಿಸುತ್ತಿವೆ.
ಅಂತೆಯೆ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯನ್ನು ಮಾದರಿಯಾಗಿ ಪಡೆದಿದರುವ ಎಐಎಡಿಎಂಕೆ ಪಕ್ಷವು ಎಲ್ಲಾ ಕುಟುಂಬ ಕಾರ್ಡ್ ಹೊಂದಿರುವವರಿಗೆ ಕುಲವಿಳಕ್ಕು ಯೋಜನೆಯ ಮೂಲಕ ಮಹಿಳೆಯರಿಗೆ ಮಾಸಿಕ 2,000/- ರೂ.ಗಳ ಸಹಾಯವನ್ನು ನೀಡಲಾಗುವುದು. ಈ ಮೊತ್ತವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಘೋಷಿಸಿದೆ.
ವಿಶೇಷವಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದ್ದ ತಮಿಳುನಾಡಿನಲ್ಲಿ ಪುರುಷರು ಉಚಿತವಾಗಿ ಪ್ರಯಾಣಸಲು ಯೋಜನೆಯನ್ನು ಎಐಎಡಿಎಂಕೆ ಘೋಷಿದೆ.
@AIADMKOfficial #என்றும்_எங்கள்_வாத்தியார்MGR#MGR109 pic.twitter.com/PzNr5o461d
— Edappadi K Palaniswami-SayYEStoWomenSafety&AIADMK (@EPSTamilNadu) January 17, 2026
ಉಳಿದಂತೆ ಸ್ವಂತ ಮನೆ ಇಲ್ಲದವರಿಗೆ ಭೂಮಿಯನ್ನು ಖರೀದಿಸಿ ಕಾಂಕ್ರೀಟ್ ಮನೆಗಳನ್ನು ನಿರ್ಮಿಸುವುದು.
100 ದಿನಗಳ ಉದ್ಯೋಗ ಯೋಜನೆಯನ್ನು 150 ದಿನಗಳಿಗೆ ಹೆಚ್ಚಿಸಲಾಗುವುದು.
ಅಮ್ಮ ದ್ವಿಚಕ್ರ ವಾಹನ ವಿತರಣಾ ಯೋಜನೆ ಮೂಲಕ ಮಹಿಳೆಯರಿಗೆ 25,000/- ರೂ. ಸಬ್ಸಿಡಿ ನೀಡಲಾಗುವುದು ಮತ್ತು ಮಹಿಳೆಯರಿಗೆ 5 ಲಕ್ಷ ಅಮ್ಮ ದ್ವಿಚಕ್ರ ವಾಹನಗಳನ್ನು ನೀಡಲಾಗುವುದು ಎಂದಿದೆ.