ಬೆಂಗಳೂರು: ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.
ಮೃತ ಯುವಕನನ್ನು ಕಿರಣ್ ಎಂದು ಗುರುತಿಸಲಾಗಿದೆ.
ಬಹು ವರ್ಷಗಳಿಂದ ಜಿಮ್ ಟ್ರೈನರ್ ಹಾಗೂ ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಕಿರಣ್ ಗುರುತಿಸಿಕೊಂಡಿದ್ದ.
ಇದೇ ವೇಳೆ ಹುಡುಗಿಯೊಬ್ಬರು ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಕಳೆದ ಮೂರು ವರ್ಷಗಳಿಂದ ಮೃತ ಕಿರಣ್ ಯುವತಿಯನ್ನು ಪ್ರೀತಿಸುತ್ತಿದ್ದನಂತೆ, ಅಷ್ಟೇ ಅಲ್ಲದೇ ವಾಲೆಂಟೈನ್ಸ್ ಡೇ ಗೆ ಆಕೆಗೆ ಗಿಫ್ಟ್ ನೀಡಲು ಕೂಡ ಸ್ಪೆಷಲ್ ಪ್ಲಾನ್ ಮಾಡಿದ್ದ ಎನ್ನಲಾಗಿದೆ.
ಆದರೆ ಯುವತಿ ಬೇರೆ ಯುವಕನೊಂದಿಗೆ ಮದುವೆ ಫಿಕ್ಸ್ ಆಗಿರುವ ಕುರಿತು ಲಗ್ನ ಪತ್ರಿಕೆ ಹಾಗೂ ಹೊಸ ಸೀರೆ ತೋರಿಸಿದ ಕಾರಣ ಕಿರಣ್ ಮನನೊಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕಿರಣ್ ಪೋಷಕರು ಆರೋಪಿಸಿದ್ದಾರೆ.
ಸದ್ಯ ಈ ಘಟನೆಯು ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.