ನವದೆಹಲಿ: ಮಂಗಳವಾರವಷ್ಟೆ ಕೇಂದ್ರ ಸರ್ಕಾರದ ವೈಪಲ್ಯಗಳು, ಅಮೇರಿಕಾ ಜೊತೆ ಒಪ್ಪಂದದಿಂದ ಭಾರತದ ಮೇಲೆ ಉಂಟಾಗ ಬಹುದಾದ ಪರಿಣಾಮಗಳ ಕುರಿತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ (AKhilesh yadhav), ಮೋದಿ ಸರ್ಕಾರದ ಕುರಿತು ಹರಿಹಾಯ್ದಿದ್ದ ಬೆನ್ನಲ್ಲೇ, ಬುಧವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೇಲೆ ಅಮೇರಿಕಾ ಅಧ್ಯಕ್ಷ ಟ್ರಂಪ್ Trump) ಹಿಡಿತ ಸಾಧಿಸಿ, ಭಾರತದ ವಿರೋಧಿ ಟ್ರೇಡ್ ಡೀಲ್ ಮಾಡಿಸಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಹೌದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಆತ್ಮಚರಿತ್ರೆಯ ಉಲ್ಲೇಖದ ವಿಚಾರವಾಗಿ ಸಂಸತ್ತಿನಲ್ಲಿ ವಾರಗಳ ಕಾಲ ಗದ್ದಲ ನಡೆದ ಬಳಿಕ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದು ಗಮನ ಸೆಳೆದಿದೆ.
US tariffs on 🇧🇩 textiles: 0%
— Mohit Chauhan (@mohitlaws) February 11, 2026
US tariffs on 🇮🇳 textiles: 18%
The Indian textile industry is finished.
—LoP Rahul Gandhi pic.twitter.com/rY8AsLufQ2
ಈ ವೇಳೆ ಭಾರತ -ಅಮೆರಿಕ ವ್ಯಾಪಾರ ಒಪಂದದ ಕುರಿತು ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಭಾರತ ಯಾರಿಂದ ತೈಲ ಖರೀದಿಸಬಹುದು ಅಥವಾ ಖರೀದಿಸಬಾರದು ಎಂದು ಆಮೆರಿಕ ನಿರ್ಧರಿಸುತ್ತಿದೆ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಮೂಲಕ ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ. ನಿಮಗೆ ನಾಚಿಕೆ ಇಲ್ಲ ಎಂದು ಕಿಡಿ ಕಾರಿದರು.
India–US Trade Deal ने 140 करोड़ भारतीयों का भविष्य गिरवी रख दिया।
— Rahul Gandhi (@RahulGandhi) February 11, 2026
युवाओं के रोज़गार दांव पर,
किसानों की फसल समझौते की मेज़ पर,
और ऊर्जा सुरक्षा विदेशी शर्तों पर!
कोई PM बिना भारी दबाव के ऐसे घुटने नहीं टेकता। भारत समझता है – यह समझौता बराबरी का नहीं, मजबूरी का है।
Epstein… pic.twitter.com/8wzzQCa6nS
ಅಮೆರಿಕದೊಂದಿಗೆ ಸಮಾನ ಪ್ರಯೋಜನಗಳನ್ನು ಪಡೆಯದೇ ಒಪ್ಪಂದ ಮಾಡಿಕೊಳ್ಳುವ ಮೂಲಕ ಸರಕಾರ ಸಂಪೂರ್ಣ ಶರಣಾಗಿದೆ. ಈ ಮೊದಲು ಭಾರತದ ಉತ್ಪನ್ನಗಳಿಗೆ ಶೇ.3ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಇದನ್ನು ಈಗ ಶೇ.18ಕ್ಕೆ ಏರಿಸಲಾಗಿದೆ. ಆದರೂ ಇದನ್ನು ಚಾರಿತ್ರಿಕ ಒಪ್ಪಂದ ಎಂದು ಸಂಭ್ರಮಿಸಲಾಗುತ್ತಿದೆ. ನಾವು ಜವಳಿ ಉತ್ಪನ್ನಗಳ ರಷ್ಟಿಗೆ ಶೇ. 18 ಸುಂಕ ನೀಡಬೇಕಾಗಿದೆ. ಆದರೆ ನೆರೆಯ ಬಾಂಗ್ಲಾದೇಶದ ಟೆಕ್ಸ್ ಟೈಲ್ ಉದ್ಯಮಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಟ್ರಂಪ್ ಬಿಗಿಪಟ್ಟು ಹಾಕಿ ಮೋದಿ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ರಾಹುಲ್ ದೂರಿದರು. ಮೋದಿ ಕಣ್ಣಲ್ಲಿ ಭಯ ಕಾಣುತ್ತಿದೆ. ಈ ಒಪ್ಪಂದದ ಬಳಿಕ ಅಮೆರಿಕದ ಆಮದು 46 ಬಿಲಿಯನ್ ಡಾಲರ್‌ಗಳಿಂದ 146 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಲಿದೆ. ಆದರೆ, ಅಮೆರಿಕಕ್ಕೆ ಭಾರತದ ಬಗ್ಗೆ ಯಾವುದೇ ಬದ್ಧತೆ ಇಲ್ಲ, ಆದರೆ ಭಾರತಕ್ಕೆ ಅಮೆರಿಕದ ಬದ್ರತೆ ಇದೆ. ಈ ಒಪ್ಪಂದ ಯಾವ ಪ್ರಧಾನಿ ಒಪ್ಪುತ್ತಿರಲಿಲ್ಲ. ನಾವು ಮೂರ್ಖರಂತೆ ನಿಂತಿದ್ದೇವೆ ಎಂದು ಆರೋಪಿಸಿದ ರಾಹುಲ್, ನಮ್ಮೊಂದಿಗೆ ಸೇವಕರಂತೆ ಅಲ್ಲ ಸಮಾನರಂತೆ ಮಾತನಾಡಿ ಎಂದು ಅಮೆರಿಕಕ್ಕೆ ಸಂದೇಶ ನೀಡಿದರು.
ಬಜೆಟ್ ಮೇಲಿನ ಭಾಷಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ಅವರ ಮೇಲೆ ಅಮೆರಿಕದ ನೇರ ಒತ್ತಡ ಇದೆ ಎಂದು ಆರೋಪಿಸಿದರು. ಎಪ್‌ಸ್ಟೀನ್ ಫೈಲ್ಸ್ ಗೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆಯ ಫೈಲ್‌ಗಳಲ್ಲಿ ಹರ್ದೀಪ್ ಪುರಿ ಮತ್ತು ಅನಿಲ್ ಅಂಬಾನಿ ಹೆಸರುಗಳಿವೆ.
विश्व पटल पर देश का प्रधानमंत्री, देश का प्रतिनिधित्व करता है।
— 🇮🇳Jitendra pratap singh🇮🇳 (@jpsin1) February 10, 2026
पोस्टर में विपक्ष ने मोदी को नहीं, भारत को घुटनों पर दिखाने का काम किया है।
कांग्रेस का ये देश-विरोधी करतूत देश कभी नहीं भूलेगा 😡
नीचता की पराकाष्ठा देख रहे है,
विदेशी कोख से जन्मा बच्चा Rahul Gandhi कभी देश भक्त… pic.twitter.com/khwj2NJlup
ಅದಾನಿ ವಿರುದ್ದ ನಡೆಯುತ್ತಿರುವ ಪ್ರಕರಣದಲ್ಲಿ ಸಮನ್ಸ್ ಜಾರಿಯಾಗಿದೆ. ಆದರೆ ಕಳೆದ 18 ತಿಂಗಳಿಂದ ಭಾರತ ಸರಕಾರ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಡೇಟಾ, ರೈತರು, ಇಂಧನ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಈಗ ಏನಾಗಿದೆಯೋ ಅದನ್ನು ಸಾಮಾನ್ಯ ಪರಿಸ್ಥಿತಿಯಲ್ಲಿ ಯಾವ ಪ್ರಧಾನಿಯೂ ಮಾಡಲ್ಲ. ಯಾರದೋ ಹಿಡಿತದಲ್ಲಿ ಸಿಲುಕಿದಾಗ ಮಾತ್ರ ಒಬ್ಬರು ಹೀಗೆ ಮಾಡುತ್ತಾರೆ ಎಂದು ರಾಹುಲ್ ದೂರಿದರು.