ಹೊಸಕೋಟೆ: ಬೈಕ್, ಕಾರು ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) 7 ಮಂದಿ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಸೂಲಿಬೆಲೆ ಹೋಬಳಿ ಕಂಬ್ಳಿಪುರ ಗೇಟ್ ಬಳಿ ಸಂಭವಿಸಿದೆ.
ಇಂದು ಬೆಳಗ್ಗಿನ ಜಾವ ಸುಮಾರು 05-15ರ ಸಮಯದಲ್ಲಿ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕ್ಯಾಂಟರ್, ಬ್ರೀಝಾ ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿದ್ದು, ಬೆಂಗಳೂರಿನ ಕೊತ್ನೂರು ಮೂಲದ 7 ಜನ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಮೃತರನ್ನು ಬೈಕ್ ಸವಾರ ದೇವನಹಳ್ಳಿ ದೇವ ನಾಯಕನಹಳ್ಳಿ ಗ್ರಾಮದ ಗಗನ್ (26 ವರ್ಷ, ಬೆಂಗಳೂರಿನ ಹೆಚ್‌ವಿಆರ್ ಲೇಔಟ್ ನಿವಾಸಿಗಳಾದ ಆರ್ಹಾನ್ ಶರೀಫ್ (16 ವರ್ಷ), ಅಯಾನ್ (17 ವರ್ಷ), ಅಶ್ವಿನ್ ನಾಯರ್ (17 ವರ್ಷ), ಪ್ರೆಷರ್ ಟೌನ್ ನಿವಾಸಿ ಭರತ್ (18 ವರ್ಷ), ಈತನ್ ಜಾರ್ಜ್ ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ.
ಗಾಯಾಳುಗಳನ್ನು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಸೂಲಿಬೆಲೆ ಪೊಲೀಸರು ಹಾಜರಿದ್ದು ತನಿಖೆ ಕೈಗೊಂಡಿದ್ದಾರೆ.