ದೊಡ್ಡಬಳ್ಳಾಪುರ: ನಗರದ ರಾಜಕಮಲ್ ಚಿತ್ರಮಂದಿರದ ಮಾಲೀಕರಾಗಿದ್ದ ಕೆ.ಸಿ.ರುದ್ರೇಗೌಡ (K.C. Rudre Gowda) ಮಂಗಳವಾರ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಮೃತರು ಇಬ್ಬರು ಗಂಡು, ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯ ಮಂಗಳವಾರ ಸಂಜೆ ನಗರದ ಹೊರವಲಯದ ಮುಕ್ತಿಧಾಮದಲ್ಲಿ ನೆರವೇರಿತು.
ಕನ್ನಡ ಚಲನಚಿತ್ರೋದ್ಯಮದಲ್ಲಿ ರಾಜ್‌ಕಮಲ್ ಆರ್ಟ್ಸ್ ಬ್ಯಾನರ್ ಮೂಲಕ ನಿರ್ಮಾಪಕರಾಗಿ ವಿತರಕರಾಗಿ ಹೆಸರಾಗಿದ್ದ ಕೆ.ಸಿ.ಎನ್ ಗೌಡ ಸಹೋದರರಲ್ಲಿ ಒಬ್ಬರಾದ ಕೆ.ಸಿ.ರುದ್ರೇಗೌಡ ಅವರು ತಮ್ಮ ಹಿರಿಯ ಸಹೋದರ ಕೆ.ಸಿ.ನಂಜುಂಡೇಗೌಡ ಅವರೊಂದಿಗೆ ಕನ್ನಡ ಚಿತ್ರ ನಿರ್ಮಾಪಕರಾಗಿ, ವಿತರಕರಾಗಿ, ಪ್ರದರ್ಶಕರಾಗಿ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಕೆ.ಸಿ.ರುದ್ರೇಗೌಡ ಅವರ ನಿಧನಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ತಾಲೂಕಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.