ದೊಡ್ಡಬಳ್ಳಾಪುರ: ಅಡುಗೆ ಮಾಡುವ ವೇಳೆ ವೇಲ್ಗೆ ತಗುಲಿದ ಬೆಂಕಿ (Fire), ಮಹಿಳೆಯನ್ನು ಬಲಿ ಪಡೆದಿರುವ ಘಟನೆ ನಗರದ ಇಸ್ಲಾಂಪುರದ 5 ನೇ ಕ್ರಾಸ್ ನಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಅಸ್ಮ್ತಾಜ್ (41 ವರ್ಷ ಎಂದು ಗುರುತಿಸಲಾಗಿದೆ.
ಫೆ.12 ರಂದು ಮನೆಯಲ್ಲಿ ಅಡುಗೆ ಮಾಡುವ ವೇಳೆ ವೇಲ್ಗೆ ತಗುಲಿದ ಬೆಂಕಿಯಿಂದ ಅಸ್ಮ್ತಾಜ್ ಅವರಿಗೆ ಗಾಯಗಳಾಗಿದ್ದು, ಆ ವೇಳೆ ಆರೋಗ್ಯವಾಗಿದ್ದ ಅವರು, ಏಕಾಏಕಿ ಅನರೋಗ್ಯಕ್ಕೆ ಒಳಗಾಗಿದ್ದಾರೆ.
ಕುಟುಂಬಸ್ಥರು ಕೂಡಲೇ ನಗರದ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಫೆ.17) ರಾತ್ರಿ ಅಸ್ಮ್ತಾಜ್ ಅವರು ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.