
ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ (MPCS) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆದಿದೆ.
ಜಿಪಂ ಮಾಜಿ ಸದಸ್ಯ ದಿ. ಅಪ್ಪಯ್ಯಣ್ಣ ಅವರ ಅಭಿಲಾಷೆಯಂತೆ ಇಂದಿಗೂ ಹಾಡೋನಹಳ್ಳಿ ಡೈರಿ ಚುನಾವಣೆಯಲ್ಲಿ ಯಾವುದೇ ಚುನಾವಣೆ ಇಲ್ಲದೆ, ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ.
ಚುನಾವಣಾ ಅಧಿಕಾರಿ ಕೆ.ಎನ್ ನಾಗಮಣಿ ನೇತೃತ್ವದಲ್ಲಿ ಇಂದು ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಇದರ ಅನ್ವಯ 2026-31 ನೇ ಅವಧಿಯ ಹಾಡೋನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅದ್ಯಕ್ಷರಾಗಿ ಹೆಚ್. ಎ.ನಾಗರಾಜು ಅಪ್ಪಯ್ಯಣ್ಣ, ಉಪಾಧ್ಯಕ್ಷರಾಗಿ ಅಪ್ಪಯ್ಯ ನಾಗಪ್ಪ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದೇ ವೇಳೆ 11 ಜನ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಅದ್ಯಕ್ಷ ನಾರಾಯಣಪ್ಪ, ಎಂಪಿಸಿಎಸ್ ಹಾಗೂ ವಿ ಎಸ್ಎಸ್ಎನ್ ಮಾಜಿ ಅಧ್ಯಕ್ಷ ಎಂ.ಮುನೇಗೌಡ, ಮಾಜಿ ಅದ್ಯಕ್ಷರಾದ ಎಂ.ಮುನಿರಾಜು, ವೆಂಕಟೇಶ, ಗ್ರಾಮ ಪಂ.ಮಾಜಿ ಅದ್ಯಕ್ಷ ಚೌಡ್ಡಪ್ಪ, ನವೃತ್ತ ಪೋಲಿಸ್ ಅಧಿಕಾರಿ ರಂಗಸ್ವಾಮಿ, ವಿ.ಎಸ್.ಎಸ್.ಎನ್ ನಿರ್ದೇಶಕ ಪಿಳ್ಳಪ್ಪ, ಮಾಜಿ ನಿರ್ದೇಶಕ ರಾಜು, ರೈಲ್ವೆ ಇಲಾಖೆ ಸುಬ್ರಹ್ಮಣ್ಯ, ಮುಖಂಡರಾದ ಸುಬ್ಬಣ್ಣಣ ಎಂಪಿಸಿಎಸ್ ಕಾರ್ಯನಿರ್ವಾಹಕ ಎ.ಎಂ.ನಾಗರಾಜು ಮತ್ತಿತರರಿದ್ದರು.