ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಗುಂಡಮಗೆರೆಯಲ್ಲಿ ಏಪ್ರಿಲ್ 23 ರಂದು ಶನೇಶ್ವರ ಸ್ವಾಮಿಯ 3ನೇ ವರ್ಷದ ಬ್ರಹ್ಮರಥೋತ್ಸವ (Brahmarathotsava) ಆಯೋಜಿಸಲಾಗಿದೆ.

ಬ್ರಹ್ಮರಥೋತ್ಸವದ ಅಂಗವಾಗಿ ಏಪ್ರಿಲ್ 22 ರಂದು ಸಂಜೆ 5.30ಕ್ಕೆ ಕಲ್ಯಾಣೋತ್ಸವ ನಡೆಯಲಿದೆ.
ಏ.23 ರಂದು ಮಧ್ಯಾಹ್ನ 12.30ರಿಂದ ಜೇಷ್ಠಾದೇವಿ ಸಮೇತ ಶ್ರೀ ಶನೇಶ್ವರ ಸ್ವಾಮಿಯ 3ನೇ ವರ್ಷದ ಬ್ರಹ್ಮರಥೋತ್ಸವ ನಡೆಯಲಿದೆ. ಇದೇ ದಿನ ರಾತ್ರಿ 8ಗಂಟೆಗೆ ಸಾಸಲು ಚಿನ್ನಮ್ಮ ಹರಿಕಥೆ ಆಯೋಜಿಸಲಾಗಿದೆ.
ಏ.24 ರಂದು ರಾತ್ರಿ 8 ಗಂಟೆಗೆ ಶನೇಶ್ವರ ಸ್ವಾಮಿಯ ಹರಿಕಥೆ ಹಾಗೂ ಏ.25 ರಂದು ಸಂಜೆ 5 ಗಂಟೆ ಆರತಿ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ. (ಸಂಗ್ರಹ ಚಿತ್ರ ಬಳಸಲಾಗಿದೆ)