ದೊಡ್ಡಬಳ್ಳಾಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯಸ್ವಾಮಿ (Ghati Subrahmanya) ದೇವಾಲಯಕ್ಕೆ ರಾಜ್ಯಸಭಾ ಸದಸ್ಯ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ (Jaggesh) ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ವೇಳೆ ದೇವಾಲಯದ ಆಡಳಿತ ಮಂಡಳಿ ಜಗ್ಗೇಶ್ ಅವರಿಗೆ ಪೂಜೆ ವ್ಯವಸ್ಥೆ ಕಲ್ಪಿಸಿ, ಗೌರವಿಸಿದರು.
ದೊಡ್ಡಬಳ್ಳಾಪುರ: ತೀವ್ರವಾದ ರೈತರ ಹೋರಾಟ

ದೊಡ್ಡಬಳ್ಳಾಪುರ: ಅಭಿವೃದ್ದಿಗೆ ನಾವು ವಿರೋಧಿಗಳಲ್ಲ. ಆದರೆ ಎಲ್ಲಾ ಭೂಮಿಯನ್ನು ನಮ್ಮ ತಾಲ್ಲೂಕಿನ ರೈತರಿಂದಲೇ ಕಸಿದುಕೊಂಡು ಇಲ್ಲಿನ ರೈತರು (Farmers) ಗೂಳೆ ಹೋಗುವಂತೆ ಮಾಡುವ ಸರ್ಕಾರದ ಅವೈಜ್ಞಾನಿಕ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹಿರಿಯ ವಕೀಲರು ಹಾಗೂ ಸ್ಥಳೀಯ ರೈತರಾದ ಸಿ.ಎಚ್.ಹನುಮಂತರಾಯ (C.H. Hanumantharaya) ಹೇಳಿದರು.
ತಾಲ್ಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೇನಹಳ್ಳಿ, ನಾರಾನಹಳ್ಳಿ ಸುತ್ತಮುತ್ತ ಕೆಐಎಡಿಬಿ ಫಲವತ್ತಾದ 2,100 ಎಕರೆ ಕೃಷಿ ಭೂಮಿ ಸ್ವಾಧಿನ ಮಾಡಿಕೊಳ್ಳುವುದನ್ನು ವಿರೋಧಿಸಿ ಬುಧವಾರದಿಂದ ರೈತರು ಪ್ರಾರಂಭಿಸಿರುವ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಐದು ಸಾವಿರ ಎಕರೆ ಪ್ರದೇಶದಲ್ಲಿ ಕ್ವಿನ್ ಸಿಟಿ ಅಭಿವೃದ್ದಿಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಶೇ.80ರಷ್ಟು ಕೃಷಿ ಭೂಮಿಯು ದೊಡ್ಡಬೆಳವಂಗಲ ಹೋಬಳಿಯದ್ದೇ ಆಗಿದೆ. ಇದಿಷ್ಟೇ ಸಾಲದೆಂಬಂತೆ ಈಗ ಅಡಿಕೆ, ತೆಂಗು ಇರುವ ಫಲವತ್ತಾದ 2,100 ಎಕರೆ ಭೂಮಿಯನ್ನು ಇದೇ ಹೋಬಳಿಯಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಖಂಡನೀಯ.
ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕನಿಷ್ಟ ನಿಯಮಗಳನ್ನು ಸಹ ಪಾಲಿಸದೇ ಇಲ್ಲಿನ ಕೃಷಿ ಭೂಮಿ ಉದ್ಯಮಿಗಳ ಪಾಲಾಗುವಂತೆ ಮಾಡುವ ಹುನ್ನಾರ ರೂಪಿಸಿದೆ. ಸ್ಥಳೀಯ ಜನ್ರತಿಧಿಗಳು ರೈತರ ಭೂಮಿ ಉಳಿಸಲು ಎದೆಗಾರಿಕೆ ತೋರಬೇಕು. ಇದಕ್ಕೆ ಪೂರಕಾಗಿ ಸ್ಥಳೀ ರೈತರು ಯಾವುದೇ ರೀತಿಯ ಗೊಂದಲಗಳಿಗೆ ಒಳಗಾಗದೇ ಜನ್ರತಿನಿಧಿಗಳಿಗೆ ಬೆಂಬಲವಾಗಿ ನಿಂತು ಧರಣಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ನಮ್ಮ ಪೂರ್ವಜರ ಕಾಲದಿಂದಲೂ ಬೆಳೆ ಬೆಳೆಯುತ್ತ ಬಂದಿರುವ ಕೃಷಿ ಭೂಯನ್ನು ಖಾಲಿ ಭೂಮಿ ಎಂದು ಕಂದಾಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದರ ವಿರುದ್ಧ ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲಾಗುವುದು. ರೈತರು ಆತಂಕ ಪಡದೆ ಒಗ್ಗಟ್ಟಿನಿಂದ ಮಾನಸಿಕವಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.
ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ ಮಾತನಾಡಿ, ಕೆಐಎಡಿಬಿ ಅಧಿಕಾರಿಗಳು ರೈತರೊಂದಿಗೆ ಚರ್ಚೆ ನಡೆಸದೆ ಭೂಮಿ ಸ್ವಾಧೀನಕ್ಕೆ ಸಿದ್ಧತೆ ನಡೆಸಿರುವುದು ಖಂಡನೀಯ, ಈ ಆತಂಕ ಕೇವಲ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೇನಹಳ್ಳಿ, ನಾರಾನಹಳ್ಳಿ ಮಾತ್ರ ಸಿಮೀತವಾಗಿಲ್ಲ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಅನೇಕರು ಸಮಸ್ಯೆ ಎದುರಿಸಬೇಕಿದೆ. ಏಕೆಂದರೆ ದಾಸ್ ಪೇಟೆಯಿಂದ ಆರಂಭವಾಗಿ ಭೂ ಸ್ವಾಧೀನ ಈ ದೊಡ್ಡಬೆಳವಂಗಲ ವರೆಗೂ ಬಂದಿದ್ದು ಮುಂದಿನ ದಿನಗಳಲ್ಲಿ ಹುಸ್ಕೂರು ವರೆಗೂ ವ್ಯಾಪಿಸುವ ಆತಂಕ ಇದೆ.
ಇವರ ಕಣ್ಣು ಸಾಸಲು ಹೋಬಳಿ ಮೇಲೆ ಬಿದ್ದಿಲ್ಲ. ಏಕೆಂದರೆ ಬೆಂಗಳೂರಿನ ತ್ಯಾಜ್ಯ ಸುರಿದು ಅಲ್ಲಿನ ಅಂತರ್ಜಲವನ್ನು ಮಲಿನ ಮಾಡಿದ್ದಾರೆ.
ಈ ವ್ಯಾಪ್ತಿಯಲ್ಲಿ ಡ್ರೋನ್ ಮೂಲಕ ಸರ್ವೆ ಕಾರ್ಯ ನಡೆಸಿದ್ದಾರೆ ಎಂಬ ಆತಂಕ ರೈತರದ್ದಾಗಿದೆ. ದೊಡ್ಡಬಳ್ಳಾಪುರದ ಎಸಿ ರೈತರ ಪರವಾಗಿ ಅಲ್ಲದೆ ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.
ಭೂ ಸ್ವಾಧೀನ ವಿರೋಧಿಸಿ ಆರಂಭವಾಗಿರುವ ಹೋರಾಟ ಕ್ಷಿಪ್ರ ಬೆಳವಣಿಗೆ ಕಂಡು ತ್ವರಿತವಾಗಿ ಅಂತ್ಯಗೊಳ್ಳಬೇಕಿದೆ. ನಿಮ್ಮ ಹೋರಾಟಕ್ಕೆ ಮದುರೆ ಹೋಬಳಿ ರೈತರ ಸಂಪೂರ್ಣ ಬೆಂಬಲವಿದೆ. ಸರ್ಕಾರದ ಈ ನಿಲುವಿನ ವಿರುದ್ಧ ಹೋರಾಟಕ್ಕೆ ಕೇವಲ 5 ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಇಡೀ ಕರ್ನಾಟಕಕ್ಕೆ ಮಾದರಿಯಾಗುವಂತೆ ರೂಪುರೇಷೆ ಸಿದ್ದಪಡಿಸಬೇಕಿದೆ ಎಂದರು.
ಬುಧವಾರ ಸಂಜೆಯಿಂದ ಪ್ರಾರಂಭವಾಗಿರುವ ನಿರಂತರ ಧರಣಿ ಸತ್ಯಾಗ್ರಹದಲ್ಲಿ ವಕೀಲರಾದ ರುದ್ರಾರಾದ್ಯ, ಕೇಶವಕುಮಾರ್, ಸ್ಥಳೀಯ ಮುಖಂಡರಾದ ಪ್ರಭಬೆಳವಂಗಲ, ಎಂ.ಗೋವಿಂದರಾಜು, ಆರ್. ಚಂದ್ರತೇಜಸ್ವಿ, ಸುನಿಲ್ಕುಮಾರ್, ತಿಮ್ಮೇಗೌಡ, ರಂಗನಾಥ್, ಸಿ.ಎಚ್.ರಾಮಕೃಷ್ಣಯ್ಯ, ವಿಜಯ್ ಕುಮಾರ್, ಡಿ.ಸಿ.ರಾಮೇಗೌಡ, ಡಿ.ಸಿ.ನಾಗರಾಜು, ಕಿಶೋರ್ ಕುಮಾರ್ ಇದ್ದರು.