ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮುಖ್ಯ ರಸ್ತೆಯ ಸಮೀಪದಲ್ಲಿರುವ ಮಾರಸಂದ್ರದ ಸುಮನ ಪದವಿ ಪೂರ್ವ ಕಾಲೇಜು 2025–2026 ಸಾಲಿನ ದ್ವಿತೀಯ ಪಿಯುಸಿ (PUC) ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಈ ಸಾಲಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ 18 ಮಂದಿ ಅತ್ಯುತ್ತಮ ಶ್ರೇಣಿಯಲ್ಲಿ (Distinction) ಹಾಗೂ 21 ಮಂದಿ ಪ್ರಥಮ ಶ್ರೇಣಿಯಲ್ಲಿ (First Class) ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗವು 100% ಫಲಿತಾಂಶವನ್ನು ದಾಖಲಿಸಿ ಅತ್ಯುತ್ತಮ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ
ಜನನಿ ವಿ – 96%, ಶ್ವೇತಾ ಕೆ ಎನ್ – 95%, ಶಶಾಂಕ್ ಸಿ – 93%, ಶ್ರೇಯಾ ಶಂಕರ್ – 93%, ಚಿರಂತನ ಆರ್ ವೈ – 92% ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಾಣಿಜ್ಯ ವಿಭಾಗವು 96% ಫಲಿತಾಂಶವನ್ನು ಸಾಧಿಸಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ
ಸಿಂದು ಎಂ – 94.5%, ಮಿರಾಜುದ್ದೀನ್ ಅನ್ಸಾರಿ – 92%, ಶ್ರೀಷಾ ಎಸ್ ಯಾರಾ – 92.5%, ದೀಪಕ್ ಜಿ – 92.4%, ಧ್ರುವ ತೇಜಸ್ – 92% ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಉತ್ತಮ ಅಂಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.