ದೊಡ್ಡಬಳ್ಳಾಪುರ: ನಗರದ ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜು (Vidyanidhi College)1 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (2nd PUC Exam) ಶೇ.95. 26ರಷ್ಟು ಫಲಿತಾಂಶ ಪಡೆದುಕೊಂಡಿದೆ ಎಂದು ಪ್ರಾಂಶುಪಾಲರಾದ ಟಿ.ಕೆ. ಬಾಲಕೃಷ್ಣ ತಿಳಿಸಿದ್ದಾರೆ.

ಇಂದು ಕಾಲೇಜು ಆವರಣದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಈ ಬಾರಿಯ ಪರೀಕ್ಷೆಯಲ್ಲಿ ಕಾಲೇಜಿನ 232 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 221 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ.97.25 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.93.5 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ, ಕಾಲೇಜಿನಲ್ಲಿ 73 ವಿದ್ಯಾರ್ಥಿಗಳು ಅತ್ಯುನತ ಶ್ರೇಣಿ 136 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ PCMB ಸಂಯೋಜನೆಯ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು
ಸೈಯಿದಾ ಸುಮೇರಾ 582 (ಶೇ.97%)
ವರ್ಷಿಣಿ ಪಿ. 579 (ಶೇ. 96.5%)
ಸಂಜನ ಕೆಎಂ 576 (ಶೇ.96)
ಶಿಲ್ಪಶ್ರೀ ಎಸ್ 576 (ಶೇ.96)
ವಿಜ್ಞಾನ ವಿಭಾಗದಲ್ಲಿ PCMCS ಸಂಯೋಜನೆಯ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು
ದೀಕ್ಷಿತಾ ಎಸ್ 583 (ಶೇ.97.1)
ಪಲ್ಲವಿ ಎಂ 580 (ಶೇ.96.66)
ಡಿಯು ತರುಣ್ 573 (ಶೇ.95.5)
ಸಿದ್ದಿಕ್ ಬಾಷಾ ಎಸ್ 573 (ಶೇ.95.5)
ವಾಣಿಜ್ಯ ವಿಭಾಗದಲ್ಲಿ EBACS ಸಂಯೋಜನೆಯ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು
ಮೆಹ್ರಿನ್ ಅಜ್ರಾ 574 ( ಶೇ.97.1)
ಭೂಮಿಕ ಟಿಎನ್ 572 (ಶೇ.95.33)
ತೇಜಸ್ವಿನಿ ಎನ್ 569 (ಶೇ.94.83)