ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ (Teachers) ತಾಲ್ಲೂಕು ಘಟಕದ ಐದು ವರ್ಷಗಳ ಅವಧಿಗೆ 16 ಜನ ನಿರ್ದೇಶಕ ಆಯ್ಕೆಗೆ ನಾಮಪತ್ರಗಳ ಸಲ್ಲಿಕೆ ಕೊನೆಯ ದಿನವಾದ ಭಾನುವಾರ 24 ಜನ ನಾಮಪತ್ರಗಳನ್ನು (Nomination) ಸಲ್ಲಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಮಧು ತಿಳಿಸಿದ್ದಾರೆ.

16 ಸ್ಥಾನಗಳ ಪೈಕಿ 11 ಸಾಮಾನ್ಯ ಸ್ಥಾನಗಳಿಗೆ 18 ಜನ, 5 ಮಹಿಳಾ ಮೀಸಲು ಸ್ಥಾನಕ್ಕೆ 6 ಜನ ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ. ನಾಮ ಪತ್ರಗಳನ್ನು ಹಿಂದಕ್ಕೆ ಪಡೆಯಲು ಏಪ್ರಿಲ್ 14 ರಂದು ಸಂಜೆ 6 ಗಂಟೆವರೆಗೂ ಅವಕಾಶ ಇದೆ.

ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಗಳ ಒಟ್ಟು 756 ಜನ ಮತದಾರರಿದ್ದು, ಏಪ್ರಿಲ್ 19 ರಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಪ್ರೌಢ ಶಾಲಾ ವಿಭಾಗ) ಬೆಳಿಗ್ಗೆ 8.30 ರಿಂದ ಸಂಜೆ 4.30ರವರೆಗೆ ಮತದಾನ ನಡೆಯಲಿದೆ. ಸಂಜೆ 6.30ಕ್ಕೆ ಮತಗಳ ಎಣಿಕೆ ನಡೆಯಲಿದೆ.
ಸಾಮೂಹಿಕ ಶಿಕ್ಷಕರ ತಂಡದಿಂದ 11 ಜನ ಪುರುಷರು, 5 ಜನ ಮಹಿಳಾ ಅಭ್ಯರ್ಥಿಗಳು ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ.
ವಸಂತಗೌಡ ಶಿಕ್ಷಕ ವೇದಿಕೆ ವತಿಯಿಂದ 8 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ.
ಇನ್ಸ್ಟಾಗ್ರಾಮ್ ಪರಿಚಯ: ಬೆತ್ತಲೆ ವಿಡಿಯೊ ಪಡೆದು ಶಿಕ್ಷಕಿಗೆ ಕಿರುಕುಳ..!

ಬೆಂಗಳೂರು: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ (Instagram) ಮೂಲಕ ಶಿಕ್ಷಕಿಯೊಂದಿಗೆ (Teacher) ಸ್ನೇಹ ಬೆಳಸಿದ ಕಾಮುಕನೋರ್ವ, ಬೆತ್ತಲೆ ವಿಡಿಯೊ (Nude video) ಪಡೆದು ಆಕೆಗೆ ಕಿರುಕುಳ ನೀಡಿದ ಪ್ರಕರಣ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವರದಿಯಾಗಿದೆ.
ಶಿಕ್ಷಕಿಯ ಇನ್ಸ್ಟಾಗ್ರಾಮ್ ಖಾತೆಗೆ ಅಪರಿಚಿತ ಯುವಕನೊಬ್ಬ ಸಂದೇಶ ಕಳಿಸಿದ್ದು, ನಾನು ನಿನ್ನ ಶಾಲೆಯ ಹಳೆಯ ಸಹಪಾಠಿ. ನನಗೆ ನೀನು ನೆನಪಿಲ್ಲವಾ ಅನ್ನೋದು ಬೇರೆ ವಿಷಯ, ಆದರೆ ನಾನು ನಿನ್ನನ್ನು ನೆನಪಿಸಿಕೊಂಡಿದ್ದೇನೆ ಎಂದು ಆತ ಪರಿಚಯ ಮಾಡಿಕೊಳ್ಳುತ್ತಾನೆ.
ಈ ಮಾತಿನ ಮೂಲಕ ಅವನು ಶಿಕ್ಷಕಿಯ ವಿಶ್ವಾಸಗಳಿಸಲು ಪ್ರಯತ್ನಿಸುತ್ತಾನೆ. ನಂತರ ನಿಧಾನವಾಗಿ ಮಾತನಾಡುತ್ತಾ, ನನಗೆ ಕ್ಯಾನ್ಸರ್ ಇದೆ, ನಾನು ಇನ್ನೂ ಕೆಲವೇ ದಿನ ಬದುಕಿರುತ್ತೇನೆ, ನನ್ನ ಕೊನೆಯ ಆಸೆ ಎಂದರೆ ನಿನ್ನ ಜತೆ ದೈಹಿಕ ಸಂಬಂಧ ಬೆಳೆಸಿಕೊಳ್ಳುವುದು ಎಂದು ಹೇಳುತ್ತಾನೆ. ಇಂತಹ ಸುಳ್ಳು ಕಥೆ ಹೇಳಿ ಶಿಕ್ಷಕಿಯ ಮನಸ್ಸಿನಲ್ಲಿ ಕರುಣೆ ಮೂಡಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಶಿಕ್ಷಕಿ ಅವನ ಈ ಅಸಭ್ಯ ಬೇಡಿಕೆಗೆ ಒಪ್ಪುವುದಿಲ್ಲ. ದೈಹಿಕ ಸಂಬಂಧಕ್ಕೆ ಅವಕಾಶ ಕೊಡಲಾರೆ ಎಂದು ಸ್ಪಷ್ಟವಾಗಿ ತಿಳಿಸುತ್ತಾಳೆ.
ಬೆತ್ತಲೆ ವಿಡಿಯೊ ಪಡೆದು ಬ್ಲಾಕ್ ಮೇಲ್
ಕಾಮುಕನ ಈ ಕೆಟ್ಟ ಆಸೆಗೆ ಶಿಕ್ಷಕಿ ಒಪ್ಪದಿದ್ದಕ್ಕೆ ಕಾಮುಕ ಬೇರೆ ಪ್ಲಾನ್ ಮಾಡಿದ್ದು, ಈ ವೇಳೆ ಯುವಕ ನಾನು ಕೆಲವೇ ದಿನ ಬದುಕಿರುತ್ತೇನೆ. ಬೆತ್ತಲೆ ವಿಡಿಯೊ ಆದರೂ ಕಳಿಸು ಎಂದಿದ್ದ. ಇದಕ್ಕೆ ಒಪ್ಪಿದ್ದ ಶಿಕ್ಷಕಿ ಬೆತ್ತಲೆಯ ವಿಡಿಯೊ ಕಳಿಸಿದ್ದಳು. ಇದನ್ನು ಪಡೆಯುತ್ತಿದ್ದಂತೆಯೇ ಕಾಮುಕ ಹಣ ಕೊಡು, ನೇರವಾಗಿ ಸಿಗು, ಇಲ್ಲದಿದ್ದರೆ ವಿಡಿಯೊ ವೈರಲ್ ಮಾಡುತ್ತೇನೆ ಎಂದು ಬೆದರಿಸಿದ್ದ.
ಈ ಬೆದರಿಕೆ ಎದುರಿಸಿದ ಶಿಕ್ಷಕಿ, ತಾಳ್ಮೆಯಿಂದ ಯೋಚಿಸಿ, ಪೊಲೀಸರ ಸಹಾಯವನ್ನು ಪಡೆಯಲು ನಿರ್ಧರಿಸಿದ್ದಾರೆ. ಯುವಕನ ಮಾತಿಗೆ ನೇರವಾಗಿ ಬಲಿಯಾಗದೇ, ಅವನನ್ನೇ ಬಲೆಗೆ ಸೆಳೆಯುವ ರೀತಿಯಲ್ಲಿ ಯೋಜನೆ ಮಾಡಿ. ನಿನ್ನ ಮಾತಿಗೆ ನಾನು ಒಪ್ಪುತ್ತೇನೆ, ನೀನು ಬೆಂಗಳೂರಿಗೆ ಬಾ, ನೇರವಾಗಿ ಭೇಟಿಯಾಗೋಣ ಎಂದು ಹೇಳಿ ಅವನನ್ನು ಬರಲು ಪ್ರೇರೇಪಿಸಿದ್ದಾರೆ.
ಈ ಕುರಿತಂತೆ ಶಿಕ್ಷಕಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದು, ದೈಹಿಕ ಸಂಬಂಧದ ಆಸೆಗೆ ಬಿದ್ದು ಆಂದ್ರಪ್ರದೇಶದ ಪುಟ್ಟಪರ್ತಿಯಿಂದ ಯುವಕ ಬೆಂಗಳೂರಿಗೆ ಬಂದಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಯುವಕ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದ ಎಂದು ವರದಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.