ದೊಡ್ಡಬಳ್ಳಾಪುರ: ಕೋವಿಡ್-19 ಹಿನ್ನೆಲೆಯಲ್ಲಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 72 ನೆ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು ಮಾತನಾಡಿ, ಗಣರಾಜ್ಯೋತ್ಸವ ಕೋವಿಡ್ ಹಿನ್ನೆಲೆಯಲ್ಲಿ ಸರಳ ಮತ್ತು ಸುಸಜ್ಜಿತವಾಗಿ ನಡೆಸಲಾಗುತ್ತಿದ್ದು. ಈ ಒಂದು ಸಂದರ್ಭದಲ್ಲಿ ಸಂವಿಧಾನ ರೂಪುಗೊಂಡ ಬಗೆ, ಮತ್ತು ಭಾರತೀಯ ಸಂವಿಧಾನದ ರೂಪು ರೇಷೆ,ವೈಶಿಷ್ಟ್ಯ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಾರ್ಯವೈಖರಿ ಮತ್ತು ಕಾನೂನು ಪರಿಪಾಲನೆ ವಿಚಾರದಲ್ಲಿ ಅವರು ಕೈಗೊಂಡ ನಿರ್ಧಾರಗಳ ಶ್ಲಾಘನೀಯ, ಸಂವಿಧಾನದಲ್ಲಿ ಕೆಳವರ್ಗದವರಿಗೆ ,ಮಹಿಳೆಯರಿಗೆ, ಕಾರ್ಮಿಕರಿಗೆ, ಎಲ್ಲಾ ರೀತಿಯ ವರ್ಗದ ಜನರಿಗೆ ತಮ್ಮದೇ ಆದ ಸ್ಥಾನಮಾನಗಳನ್ನು ರೂಪಿಸಿಕೊಟ್ಟಿದ್ದಾರೆ. ಜನವರಿ 26 ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ದಿನ, ಪ್ರಜಾಪ್ರಭುತ್ವದ ಬುನಾದಿಗೆ ಅಡಿಪಾಯವಾದ ದಿನವಾಗಿದೆ.
ಪ್ರಪಂಚದಲ್ಲಿ ಭಾರತೀಯ ಸಂವಿಧಾನ ಅತಿದೊಡ್ಡ ಮತ್ತು ಲಿಖಿತ ಸಂವಿಧಾನ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಜಗತ್ತಿಗೆ ಸಾರಿದ ಸಂವಿಧಾನ ನಮ್ಮ ಭಾರತೀಯ ಸಂವಿಧಾನ. ಕೇವಲ ನ್ಯಾಯವಾದಿಗಳಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬ ಭಾರತೀಯನು ಸಹ ಸಂವಿಧಾನವನ್ನು ಓದಬೇಕು ಮತ್ತು ಅರಿತು ನಡೆಯಬೇಕು, ಮುನ್ನುಡಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಓದಬೇಕು ಮನದಟ್ಟು ಮಾಡಿಕೊಳ್ಳಬೇಕೆಂದರು.
ಮೂಲಭೂತ ಹಕ್ಕುಗಳು ಮೂಲಭೂತ ಸೌಕರ್ಯಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳನ್ನು ಎಲ್ಲರೂ ಅರಿತು ನಡೆಯಬೇಕು ಸಂವಿಧಾನದ 22 ಭಾಗಗಳು, 474 ಪರೀಚ್ಚೇದಗಳನ್ನು ಸಹ ತಿಳಿದುಕೊಳ್ಳಬೇಕು, ಪ್ರಪಂಚದ ಎಲ್ಲಾ ಸಂವಿಧಾನಗಳಿಗಿಂತ ನಮ್ಮ ಸಂವಿಧಾನವು ವಿಶೇಷ ಸ್ಥಾನಮಾನವನ್ನು ಪಡೆದಿದ್ದು ಹಲವಾರು ತಿದ್ದುಪಡಿಯ ಕಾಯ್ದೆಗಳು ಸಹ ಜಾರಿಯಲ್ಲಿವೆ. ದೇಶದ ಅಭಿವೃದ್ಧಿಗೆ ಸಂವಿಧಾನವು ಬಹುಮುಖ್ಯ ಪಾತ್ರ ವಹಿಸುತ್ತಿದೆ. ಸ್ವಾತಂತ್ರ್ಯಕ್ಕೋಸ್ಕರ ಹಲವಾರು ಮಹನೀಯರು ತ್ಯಾಗ ಬಲಿದಾನಗಳನ್ನು ಮಾಡಿ ಜಾತಿ ಧರ್ಮ ಮತ ಮರೆತು ಶ್ರಮಿಸಿದ್ದಾರೆ, ಅವರಂತೆ ನಾವು ಸಹ ಸಮಾಜದ ಹಿತದೃಷ್ಟಿ ಯಲ್ಲಿ ನಡೆಯಬೇಕು ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ದೇಶದ ಎಲ್ಲಾ ಕಡೆ ವಿಜೃಂಭಣೆಯಿಂದ ಮತ್ತು ಸರಳ ರೀತಿಯಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಅದೇ ರೀತಿ ನಮ್ಮ ದೊಡ್ಡಬಳ್ಳಾಪುರದಲ್ಲಿ ಸಹ ಪ್ರತಿ ವರ್ಷದಂತೆ ಈ ವರ್ಷ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ದಿನ ಬಹಳ ಸಂತೋಷದ ದಿನ, ಭಾರತಕ್ಕೆ ಸಂವಿಧಾನವನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಡಾ ಬಿ.ಆರ್. ಅಂಬೇಡ್ಕರ್ ಅವರನ್ನು ನಾವು ಪ್ರತಿದಿನ ಸ್ಮರಿಸಬೇಕು. ಭಾರತದ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಉಸಿರು, ಭಾರತೀಯ ಕಾನೂನುಗಳು,ಮೂಲಭೂತ ಸೌಕರ್ಯಗಳು, ಮೂಲಭೂತ ಹಕ್ಕುಗಳು, ಶಿಷ್ಟಾಚಾರಗಳು ಜಾರಿಗೊಂಡ ಈ ದಿನ ಪ್ರತಿಯೊಬ್ಬ ಭಾರತೀಯನ ಸುದಿನ, ಈ ನಮ್ಮ ಭಾರತೀಯ ಸಂವಿಧಾನಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ನೀಡಿ ಜಗತ್ತೇ ಭಾರತದ ಸಂವಿಧಾನದತ್ತ ಹಿಂತಿರುಗಿ ನೋಡುವಂತೆ ಮಾಡಿದವರು ನಮ್ಮ ಡಾ. ಬಿ.ಆರ್. ಅಂಬೇಡ್ಕರ್ ಅವರು, ಭಾರತದ ಸಂಸ್ಕೃತಿ ಸಾಹಿತ್ಯ ಮತ್ತು ಅಭಿವೃದ್ಧಿಗೂ ಸಂವಿಧಾನವು ಅತಿ ಹೆಚ್ಚು ಮಹತ್ವದ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಹೋರಾಡಿದ ಮತ್ತು ಸಂವಿಧಾನ ರಚನೆಗೆ ಪಾತ್ರರಾದ ಪ್ರತಿಯೊಬ್ಬರನ್ನು ನಾವು ಸ್ಮರಿಸ ಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ವಿವರ: ಸಮಾಜ ಸೇವೆ – ಮಾ.ಮುನಿರಾಜು, ಪತ್ರಿಕೋದ್ಯಮದ – ಎಂ.ಜೆ.ರಾಜಶೇಖರ ಶೆಟ್ಟಿ, ಪೌರಸೇವರಾದ – ಸಿದ್ದರಾಜು, ಯಗ್ರ ಓಬಳಮ್ಮ, ಸರ್ಕಾರಿ ಸೇವೆ – ಭಾರತಿ, ಜನಪದ ಭಜನೆ – ಕೃಷ್ಣಮೂರ್ತಿ, ಕಲೆ(ಸಂಗೀತ)- ಈರಣ್ಣ, ಶಿಕ್ಷಣ – ಜಯರಾಂ, ಮಕ್ಕಳ ವಿಭಾಗ – ಪ್ರಣತಿ(ಅಥ್ಲೆಟಿಕ್), ಭೈರವಿ( ಕಲೆ ನೃತ್ಯ), ಅದಿತಿ (ಕರಾಟೆ), ಆದಿತ್ಯ(ಕ್ರೀಡೆ), ಯೋಗಾ – ಕೃಷ್ಣಪ್ಪ.
ಈ ವೇಳೆ ತಹಶಿಲ್ದಾರ್ ಟಿ.ಎಸ್. ಶಿವರಾಜ್, ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಉಪಾಧ್ಯಕ್ಷೆ ಯಶೋದಮ್ಮ ಶಿವಕುಮಾರ್, ಇಒ ಟಿ. ಮುರುಡಯ್ಯ, ದೊಡ್ಡಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ದಿಬ್ಬೂರು ಜಯಣ್ಣ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಪೊಲೀಸ್ ಉಪಾಧೀಕ್ಷಕರು ಟಿ.ರಂಗಪ್ಪ, ನಗರಸಭೆ ಪೌರಾಯುಕ್ತ ರಮೇಶ್ ಎಸ್. ಸುಣಗಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಬೈಯ್ಯಪ್ಪರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಒ ಅನಿತಾಲಕ್ಷ್ಮೀ, ಕಸಾಪ ಅಧ್ಯಕ್ಷೆ ಪ್ರಮೀಳಾ ಮಹದೇವ್, ಗ್ರಾಪಂ ಸದಸ್ಯೆ ನಾಗರತ್ನಮ್ಮ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.