ವೇದ ಜ್ಯೋತಿಷ್ಯದ ಆಧಾರದ ಮೇಲೆ ವೃಷಭ ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ಎರಡನೇ ಜ್ಯೋತಿಷ್ಯ ರಾಶಿಯಾಗಿದ್ದು, ಆಕಾಶ ರೇಖಾಂಶದ 30-60 ಡಿಗ್ರಿಗಳನ್ನು ವ್ಯಾಪಿಸಿದೆ.
ಈ ತಿಂಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಕಾಣುತ್ತೀರಿ. ವೃತ್ತಿ ಮತ್ತು ಕುಟುಂಬದ ಕ್ಷೇತ್ರಗಳಲ್ಲಿ ಒತ್ತಡ ಮತ್ತು ಬದಲಾವಣೆಗಳನ್ನು ಎದುರಿಸಬಹುದು. ಈ ತಿಂಗಳಲ್ಲಿ ಎರಡನೇ ವಾರದ ನಂತರ ನಿಮಗೆ ಹೆಚ್ಚು ಕೆಲಸದ ಹೊಣೆಗಳು ಅಥವಾ ಸ್ಥಾನಮಾನದಲ್ಲಿ ಬದಲಾವಣೆ ಸಂಭವಿಸಬಹುದು.
ಇದನ್ನೂ ಓದಿ; ದಿನ ಭವಿಷ್ಯ: ಈ ರಾಶಿಯವರಿಂದು ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ
ನಿಮ್ಮ ಹೆಸರು, ಪ್ರಶಸ್ತಿ ಅಥವಾ ಹುದ್ದೆಯನ್ನು ಪುನಃ ಪಡೆಯಲು ನೀವು ಹೆಚ್ಚಿನ ಶ್ರಮವನ್ನಿಟ್ಟು ಕಾರ್ಯನಿರ್ವಹಿಸ ಬೇಕಾಗುತ್ತದೆ. ತಿಂಗಳ ಕೊನೆಯ ವಾರದಲ್ಲಿ ವೃತ್ತಿ ಕ್ಷೇತ್ರದಲ್ಲಿ ಕೆಲವೆ ಸಕಾರಾತ್ಮಕ ಬದಲಾವಣೆಗಳು ಸಂಭವಿಸಬಹುದು. ಉದ್ಯೋಗ ಬದಲಿಸಲು ಇದು ಸೂಕ್ತ ಕಾಲಕಾಲವಲ್ಲ.
ಈ ತಿಂಗಳು ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ನಿಮಗೆ ಹೆಚ್ಚುವರಿ ಆದಾಯವು ಲಭಿಸುತ್ತದೆ ಮತ್ತು ನಿಮ್ಮ ಹೂಡಿಕೆಗಳು ಉತ್ತಮ ಲಾಭ ನೀಡುತ್ತವೆ. ತಿಂಗಳ ಎರಡನೇ ವಾರದ ನಂತರ ನಿಮ್ಮ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮುಂದಿನ ತಿಂಗಳಿಗೆ ಅಥವಾ ತಿಂಗಳ ಕೊನೆಯ ವಾರಕ್ಕೆ ಮುಂದೂಡುವುದು ಉತ್ತಮ.
ಕುಟುಂಬದ ದೃಷ್ಟಿಯಿಂದ, ನೀವು ಉತ್ತಮ ಸಮಯವನ್ನು ಕಾಣುತ್ತೀರಿ. ಕೆಲವರಿಗೆ ಕುಟುಂಬ ಸದಸ್ಯರೊಂದಿಗೆ ಅಥವಾ ಜೀವನ ಸಂಗಾತಿಯೊಂದಿಗೆ ಇರುವ ಸಮಸ್ಯೆಗಳು ಬಗೆಹರಿಯಬಹುದು. ಸ್ನೇಹಿತರಿಂದ ಉತ್ತಮ ಬೆಂಬಲ ದೊರಕುವುದು. ನಿಮ್ಮ ಮಕ್ಕಳು ತಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಾರೆ, ಆದರೆ ಕೆಲವೊಮ್ಮೆ ಮಕ್ಕಳಲ್ಲಿ ಒಂದಿಗಾದರೂ ಆರೋಗ್ಯದ ಸಮಸ್ಯೆಗಳು ಕಾಣಿಸಬಹುದು.
ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ಸಾಮಾನ್ಯವಾಗಿರುತ್ತದೆ. ರಕ್ತ, ತಲೆಯ ಕಿವಿ ಅಥವಾ ಹೊಟ್ಟೆಯ ಸಮಸ್ಯೆಗಳು ಸ್ವಲ್ಪ ಉಂಟಾಗಬಹುದು. ಅನಾರೋಗ್ಯಕರ ಆಹಾರ ಸೇವನೆಯಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಆಹಾರದ ಚಟುವಟಿಕೆಗಳಲ್ಲಿ ಹೆಚ್ಚು ಗಮನ ಹರಿಸಬೇಕು. ಮೂರನೇ ವಾರದಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.
ವ್ಯಾಪಾರದಲ್ಲಿ ಅಥವಾ ಸ್ವಯಂ ಉದ್ಯೋಗದಲ್ಲಿರುವವರಿಗೆ ಮೂರನೇ ವಾರದಿಂದ ಉತ್ತಮ ಆದಾಯ ಮತ್ತು ಬೆಳವಣಿಗೆ ಕಾಣಬಹುದು. ಸಹಭಾಗಿತ್ವದ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಗೆ ಇದು ಸೂಕ್ತ ಸಮಯವಲ್ಲ. ಈ ತಿಂಗಳು ನೀವು ಸಣ್ಣ ಹೂಡಿಕೆಗಳನ್ನು ಮಾಡಬಹುದು. ತಿಂಗಳ ದ್ವಿತೀಯಾರ್ಧದಲ್ಲಿ ವ್ಯಾಪಾರದಲ್ಲಿ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಾಣಬಹುದು.
ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯವಾಗಿರುತ್ತದೆ. ಕೆಲವೆ ಸಂದರ್ಭಗಳಲ್ಲಿ ನಿಮ್ಮ ಆತ್ಮವಿಶ್ವಾಸ ಕಡಿಮೆ ಕಾಣಬಹುದು, ಆದ್ದರಿಂದ ನೀವು ಸದೃಢವಾಗಿರಬೇಕು. ನಿರೀಕ್ಷಿತ ಫಲಿತಾಂಶಗಳಿಗಾಗಿ ಹೆಚ್ಚು ಪರಿಶ್ರಮ ಮಾಡಬೇಕು. ಈ ತಿಂಗಳ ದ್ವಿತೀಯಾರ್ಧವು ಉತ್ತಮವಾಗಿದ್ದರೂ ಕೆಲವೊಮ್ಮೆ ನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆಯಿದೆ, ಇದು ಮಾನಸಿಕ ಒತ್ತಡವನ್ನು ಉಂಟುಮಾಡಬಹುದು.
ವೃಷಭ ರಾಶಿ: ಕೃತ್ತಿಕಾ (2, 3, 4 ಪಾದ), ರೋಹಿಣಿ (4), ಮೃಗಶಿರ (1, 2 ಪಾದ) ಅಡಿಯಲ್ಲಿ ಜನಿಸಿದವರು ವೃಷಭ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಶುಕ್ರ.
ವೃಷಭ ರಾಶಿಗೆ ಸೂಚಿಸಲಾದ ಅಕ್ಷರಗಳು: ಇ, ಉ, ಎ, ಒ, ವ, ವಿ, ವು, ವೆ, ವೊ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122