ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ
ಕೋವಿಡ್–೧9 ಪ್ರಕರಣಗಳು
ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ
1ರಿಂದ ಮಧ್ಯಾಹ್ನ 1
ಗಂಟೆ ನಂತರ ಎಲ್ಲಾ ರೀತಿಯ
ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ
ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ
ಬಂದ್ ಮಾಡಲು ವ್ಯಾಪಾರಸ್ಥರು
ಕರೆ ನೀಡಿದ್ದ ಹಿನ್ನಲೆಯಲ್ಲಿ
ಬುಧವಾರ ಮಧ್ಯಾಹ್ನ 2ರ
ನಂತರ ನಗರದ ಮುಖ್ಯರಸ್ತೆ,ಬಸ್ ನಿಲ್ದಾಣದ
ಪ್ರದೇಶ,ಮಾರುಕಟ್ಟೆ ಪ್ರದೇಶ
ಮೊದಲಾದ ವಾಣಿಜ್ಯ ಪ್ರದೇಶಗಳ
ಅಂಗಡಿ ಮುಗ್ಗಟ್ಟುಗಳು ಸ್ವಯಂ
ಪ್ರೇರಿತವಾಗಿ ಬಂದ್ ಮಾಡಿ
ಬೆಂಬಲ ಸೂಚಿಸಲಾಯಿತು.ನಗರದ
ಇತರೆಡೆ ಸಹ ಬಹಳಷ್ಟು
ಅಂಗಡಿಗಳು ಮಧ್ಯಾಹ್ನದ ನಂತರ
ಬಾಗಿಲು ಮುಚ್ಚಿದ್ದರಿಂದ ನಗರದಲ್ಲಿ
ನೀರವ ಮೌನ ಆವರಿಸಿತ್ತು.
ಈ ನಡುವೆ ಕೆಲವು
ಹೋಟೆಲ್ ಹಾಗೂ ಬಟ್ಟೆ
ವ್ಯಾಪಾರಿಗಳು ಕೆಲವು ದಿನಗಳವರೆಗೆ
ಪೂರ್ಣ ಬಂದ್ ಮಾಡಲು
ನಿರ್ಧರಿಸಿರುವುದರಿಂದ
ಬೆಳಗಿನಿಂದಲೇ ಅಂಗಡಿಗಳನ್ನು ತೆರೆದಿರಲಿಲ್ಲ.ನಗರದ ಚಿನ್ನದ
ವ್ಯಾಪಾರಿಗಳು ಜುಲೈ 5ರವರೆಗೆ
ದಿನಪೂರ್ತಿ ಬಂದ್ ಮಾಡುವ
ನಿರ್ಧಾರ ಕೈಗೊಂಡಿದ್ದಾರೆ.
ಮಧ್ಯಾಹ್ನದ ನಂತರ ಸಾರಿಗೆ
ಸಂಚಾರ ಎಂದಿನಂತೆ ಇದ್ದರೂ
ಸಹ ಪ್ರಯಾಣಿಕರಿಲ್ಲದೇ ಬಸ್ಗಳು ಖಾಲಿ
ಸಂಚರಿಸುತ್ತಿದ್ದ ದೃಶ್ಯ ಕಂಡು
ಬಂದಿತು.
ದೊಡ್ಡಬಳ್ಳಾಪುರದ ರಸ್ತೆ ಬಂದ್ಗಳು:
ನಗರದಲ್ಲಿ 5 ಕಂಟೈನ್ಮೆಂಟ್ ಪ್ರದೇಶಗಳನ್ನಾಗಿ
ಘೋಷಿಸಿ ಇಲ್ಲಿ ಸಂಚಾರವನ್ನು
ನಿರ್ಬಂಧಿಸಿ ನಗರಸಭೆಯಿಂದ ಬ್ಯಾರಿಕೇಡ್
ಹಾಕಿ ಸೂಚನಾಫಲಕಗಳನ್ನು ಹಾಕಲಾಗಿದೆ.ಆದರೆ ಕೆಲವು
ಕಂಟೈನ್ಮೆಂಟ್
ಪ್ರದೇಶವಲ್ಲದ ರಸ್ತೆಗಳಲ್ಲಿ ಹಾಗೂ
ಗಲ್ಲಿಗಳಲ್ಲಿ ಸಾರ್ವಜನಿಕರೇ ಬಂದ್
ಮಾಡಿರುವುದರಿಂದ,ತುರ್ತಾಗಿ ಓಡಾಡಬೇಕಾದ
ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ.
ಕೆಲವೆಡೆ ವಾಹನ ಸಂಚಾರಕ್ಕಾಗಿ
ರಸ್ತೆ ತೆರವು ಮಾಡಿಕೊಂಡು
ಸ್ಥಳೀಯರೊಡನೆ ವಾಗ್ವಾದ ನಡೆಸಿದ
ಪ್ರಸಂಗಗಳು ನಡೆದಿವೆ. ಪ್ರಮುಖ
ಬ್ಯಾರಿಕೇಡ್ಗಳ
ಬಳಿ ಪೊಲೀಸ್ ಕಾವಲು
ಹಾಕಬೇಕು. ಎಲ್ಲಂದರಲ್ಲಿ ರಸ್ತೆ
ಬಂದ್ ಮಾಡುವವರ ಮೇಲೆ
ಕ್ರಮ ಕೈಗೊಳ್ಳಬೇಕಿದೆ ಎಂದು
ಸಾರ್ವಜನಿಕರು ದೂರಿದ್ದಾರೆ.
ಆಟೋ ಪ್ರಚಾರ:
ನಗರದಲ್ಲಿ ಕೊವಿಡ್ ಪ್ರಕರಣಗಳು
ಹೆಚ್ಚಾಗಿರುವುದರಿಂದ ಸಾರ್ವಜನಿಕರು ಅನಗತ್ಯ
ಓಡಾಟ ಮಾಡಬಾರದು.ಬ್ಯಾರಿಕೇಡ್ಗಳನ್ನು ನಿಯಮ
ಉಲ್ಲಂಘಿಸಿ ದಾಟಿದರೆ ಕಾನೂನು
ಕ್ರಮ ಕೈಗೊಳ್ಳಲಾಗುವುದು. ಕೊವಿಡ್
ಮಾರ್ಗಸೂಚಿ ನಿಯಮಗಳನ್ನು ಸಾರ್ವಜನಿಕರು
ಕಡ್ಡಾಯವಾಗಿ ಫಾಲಿಸಬೇಕು ಎಂದು
ಆಟೋಗಳಲ್ಲಿ ನಗರಸಭೆಯ ಟಿಪ್ಪರ್
ವಾಹನಗಳಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ.