ದೊಡ್ಡಬಳ್ಳಾಪುರ: ಕರೊನಾ ಆತಂಕದ ನಡುವೆಯೂ ಶಿಕ್ಷಣ ಇಲಾಖೆ ಬಿಇಒ ಬೈಯಪ್ಪರೆಡ್ಡಿ ನೇತೃತ್ವದ ತಂಡ ಶ್ರಮವಹಿಸಿ.ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು SSLC ಅಗ್ನಿ ಪರೀಕ್ಷೆಯನ್ನು ನಡೆಸುವಲ್ಲಿ ಬಹುತೇಕ ಯಶಸ್ವಿಯಾಗಿದೆ.
ಕೊನೆಯ ದಿನದ SSLC ಹಿಂದಿ ವಿಷಯದ ಪರೀಕ್ಷೆ ದೊಡ್ಡಬಳ್ಳಾಪುರದಲ್ಲಿ ಇದೀಗ ಆರಂಭವಾಗಿದ್ದು,3400ಕ್ಕು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕಿನ ಕಾರಣ,ಹಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.ಇದರ ನಡುವೆಯೂ ಸಹ ಪರೀಕ್ಷಾರ್ಥಿಗಳು ಮುಂಜಾಗ್ರತೆವಹಿಸಿ ಉತ್ಸಾಹದಿಂದ ಪರೀಕ್ಷೆಗೆ ಹಾಜರಾಗಿದ್ದು ಯಶಸ್ವಿಯಾಗಿ ಇಂದಿನ ಕೊನೆಯ ಪರೀಕ್ಷೆ ಮುಗಿಸುತ್ತಿದ್ದಾರೆ
ಇನ್ನು ಸೀಲ್ ಡೌನ್ ವ್ಯಾಪ್ತಿಯಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳನ್ನು ಗುರುತಿಸಿ,ಅವರಿಗೆ N95 ಮಾಸ್ ವಿತರಿಸಿ ಪ್ರತ್ಯೇಕವಾದ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆಯನ್ನು ಇಂದೂ ಸಹ ಮುಂದುವರೆಸಲಾಗಿದೆ ಕ್ಷೇತ್ರಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಹರಿತಲೇಖನಿಗೆ ತಿಳಿಸಿದ್ದಾರೆ.
ಸೀಲ್ ಡೌನ್ ಮುಂಜಾಗ್ರತೆ / ಪರೀಕ್ಷಾ ಕೇಂದ್ರ ಬದಲಾವಣೆ
SSLC ಪರೀಕ್ಷೆ ಆರಂಭವದ ನಂತರ ದುರಾದೃಷ್ಟವಶಾತ್ ನಗರದಲ್ಲಿ ಕರೊನಾ ಸೋಂಕು ಉಲ್ಬಣಗೊಂಡ ಕಾರಣ ಕೆಲ ಪ್ರದೇಶಗಳನ್ನು ತಾಲೂಕು ಆಡಳಿತ ಸೀಲ್ ಡೌನ್ ಮಾಡಿತ್ತು.ಈ ವ್ಯಾಪ್ತಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ಸ್ಥಾಪನೆ ಮಾಡಲಾಗಿತ್ತು.ಅಲ್ಲದೆ ನಗರದ ಒಂದು ಪರೀಕ್ಷಾ ಕೇಂದ್ರವನ್ನು ಮತ್ತೊಂದು ಪರೀಕಾ ಕೇಂದ್ರಕ್ಕೆ ಬದಲಾಯಿಸಲಾಗಿತ್ತು.
ಒಟ್ಟಾರೆ ಮಹಾ ಮಾರಿ ಕರೊನ ಸೋಂಕಿನ ಆತಂಕದ ನಡುವೆ,ದೊಡ್ಡಬಳ್ಳಾಪುರ ಶಿಕ್ಷಣ ಇಲಾಖೆಯ ಬಿಇಒ ಬೈಯಪ್ಪರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಬಹಳಷ್ಟು ಶ್ರಮವಹಿಸಿ SSLC ಅಗ್ನಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದಾರೆ.
ಸುಗಮ ಪರೀಕ್ಷೆಗೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಹಿನ್ನೋಟ
ತಾಲೂಕಿನಲ್ಲಿ 3450ಕ್ಕು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನು ರಚಿಸಿ.ಕರೊನಾ ಸೋಂಕು ಹರಡುವಿಕೆ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಲು ಮತ್ತು ಸ್ಯಾನಿಟೈಸೇಷನ್ ಪ್ರಕ್ರಿಯೆಗಾಗಿ ಪ್ರತಿ ಕೇಂದ್ರಕ್ಕೆ 2 ದೈಹಿಕ ಶಿಕ್ಷಕರು,ಮತ್ತು ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರು,ಆಶಾ ಕಾರ್ಯಕರ್ತೆಯರು,4 ಪೊಲೀಸ್ ಸಿಬ್ಬಂದಿಗಳು ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದರು.
ಪ್ರತಿ ಪರೀಕ್ಷಾ ಕೇಂದ್ರವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು,ಪ್ರತಿ ವಿದ್ಯಾರ್ಥಿಗೆ ಎರಡು ಜೊತೆ ಮಾಸ್ಕ್ ವಿತರಿಸಲಾಗುತಿತ್ತು.ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಸ್ಯಾನಿಟೈಸರ್ ಪೂರೈಕೆ,ಪರೀಕ್ಷಾ ಕೇಂದ್ರದ ಬಾಗಿಲಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆಗೆ ಒಳಪಡಿಸಲು ಹೆಲ್ತ್ ಡೆಸ್ಕ್ ರಚಿಸಿ ತಪಾಸಣೆ ನಡೆಸಲಾಗುತ್ತಿತ್ತು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಲಾ ಮೂರು ಅಡಿಯಷ್ಟು ಚೌಕಗಳ ರಚನೆ,ಡೆಸ್ಕ್ಗೆ ಇಬ್ಬರು ವಿದ್ಯಾರ್ಥಿಗಳಂತೆ ಪ್ರತಿ ಡೆಸ್ಕ್ ಗೆ 3ಅಡಿ ಅಂತರ,ಒಂದು ಕೊಠಡಿಯಲ್ಲಿ 18ರಿಂ20 ಮಂದಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ, ರೋಗದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮೀಸಲು ಹಾಗೂ N95ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆತರಲು ಕೆಸ್ಎಸ್ಆರ್ಟಿಸಿ ಇಲಾಖೆಯ ಸಹಕಾರದೊಂದಿಗೆ 15 ಮಾರ್ಗಗಳನ್ನು ರಚಿಸಿ,17 ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು,ಈ ಮಾರ್ಗ ಗಳಿಂದ ಒಟ್ಟು 410 ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದಾರೆ.ಬಹುತೇಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದು,10.30ರ ವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ತಲುಪಲು ಅವಕಾಶ ನೀಡಲಾಗಿತ್ತು.