ದೊಡ್ಡಬಳ್ಳಾಪುರ:
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ
ನಿಗಮ ನಿಯಮಿತ ವತಿಯಿಂದ ೨೦೨೦–೨೧ನೇ ಸಾಲಿನಲ್ಲಿ ಮಡಿವಾಳ
ಸಮಾಜಕ್ಕೆ ಸೇರಿದ ಅಗಸ, ಚಕಲ,
ಧೋಬಿ, ಮಡಿವಾಳ, ಮನ್ನನ್, ಪರಿತ್,
ರಾಜಕ, ಸಕಲ, ವನ್ನನ್, ವೆಲ್ಲುತೇಡನ್,
ಸಾಕಲವಾಡು ಜನರ ಆರ್ಥಿಕ ಅಭಿವೃದ್ಧಿಗಾಗಿ,
ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ, ಸ್ವಯಂ
ಉದ್ಯೋಗ ಸಾಲ ಯೋಜನೆ, ಸ್ವ
ಸಹಾಯ ಗುಂಪುಗಳ ಮೂಲಕ ಸಾಲ
ಮತ್ತು ಸಹಾಯಧನ, ಅರಿವು ಶೈಕ್ಷಣಿಕ
ಸಾಲ ಯೋಜನೆ ಹಾಗೂ ಗಂಗಾ
ಕಲ್ಯಾಣ ನೀರಾವರಿ ಯೋಜನೆಯಡಿ ಸಾಲ
ಮತ್ತು ಸಹಾಯಧನದ ಸೌಲಭ್ಯ ಪಡೆಯಲು
ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸೌಲಭ್ಯ
ಪಡೆಯಲು ಇಚ್ಛಿಸುವ ಮಡಿವಾಳ ಸಮಾಜದವರು ಅರ್ಜಿ
ನಮೂನೆಯನ್ನು ಜಿಲ್ಲಾ ಕಛೇರಿಯಲ್ಲಿ ಅಥವಾ
ನಿಗಮದ ವೆಬ್ಸೈಟ್ನಲ್ಲಿ
ಪಡೆದು ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ
ಪ್ರಮಾಣ ಪತ್ರ, ಆಧಾರ್ ಕಾರ್ಡ್
ಮತ್ತು ಫೋಟೋವನ್ನು ಮತ್ತು ವಿದ್ಯಾರ್ಥಿಗಳ ವ್ಯಾಸಂಗದ
ದಾಖಲಾತಿಗಳು ಹಾಗೂ ಗಂಗಾ ಕಲ್ಯಾಣ
ನೀರಾವರಿ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು
ಹೊಂದಿರುವ ಜಮೀನಿನ ದಾಖಲಾತಿಗಳು ಮತ್ತು
ಸಣ್ಣ ರೈತರ ಪ್ರಮಾಣ ಪತ್ರಗಳನ್ನು
ನಿಗಮದ ವೆಬ್ಸೈಟ್ www.karnataka.gov.in/dbcdc ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು
ಸಾಧ್ಯವಾಗದೆ ಇದ್ದಲ್ಲಿ ಭರ್ತಿ ಮಾಡಿದ ಅರ್ಜಿಯನ್ನು
ದಾಖಲಾತಿಗಳೊಡನೆ ಜಿಲ್ಲೆಯ ಡಿ.ದೇವರಾಜ
ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ
ವ್ಯವಸ್ಥಾಪಕರ ಕಛೇರಿಗೆ 2020ರ ಆಗಸ್ಟ್
03 ರೊಳಗೆ ಸಲ್ಲಿಸುವುದು. ಹೆಚ್ಚಿನ
ಮಾಹಿತಿಗಾಗಿ ನಿಗಮದ ದೂರವಾಣಿ ಸಂಖ್ಯೆ:
080-23536007 ಅನ್ನು
ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಕರಾದ
ಎನ್. ಸುಜಾತ ಅವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಕರ್ನಾಟಕ
ಸವಿತಾ ಸಮಾಜ ಅಭಿವೃದ್ಧಿ ನಿಗಮ
ನಿಯಮಿತ ವತಿಯಿಂದ 2020-21ನೇ ಸಾಲಿನಲ್ಲಿ
ಸವಿತಾ ಸಮಾಜಕ್ಕೆ ಸೇರಿದ ಪರಿಯಾಳ, ಅಂಬಟ್ಟನ್,
ಬಜಂತ್ರಿ, ಬಂಡಾರಿ, ಚೌರಿಯ, ಹಡಪದ,
ಕವುಟಿಯನ್, ಕೆಲಸಿ, ಕ್ಷೌರಿಕ, ಕ್ಷೌರದ್,
ಮಹಾಲೆ, ಮಂಗಳ, ಮೇಲಗಾರ, ನಾಡಿಗ,
ನಾಪಿತ, ನವಲಿಗ್, ನಾವಿ, ನಯನಜ
ಕ್ಷತಿಯ, ನ್ಹಾನಿ, ವಾಜಾಂತ್ರಿ, ಸವಿತ,
ನಯನಜ ಕ್ಷತ್ರಿ, ನಾಡಿಗ್, ಕ್ಷೌರಿಕ್, ಕ್ಷೌರಿಕ
ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಂಪ್ರದಾಯಿಕ
ವೃತ್ತಿದಾರರ ಸಾಲ ಯೋಜನೆ ಮತ್ತು
ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ ಸಾಲ
ಮತ್ತು ಸಹಾಯಧನದ ಸೌಲಭ್ಯ ಪಡೆಯಲು
ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸೌಲಭ್ಯ
ಪಡೆಯಲು ಇಚ್ಛಿಸುವ ಸವಿತಾ ಸಮಾಜದವರು ಅರ್ಜಿ
ನಮೂನೆಯನ್ನು ಜಿಲ್ಲಾ ಕಛೇರಿಯಲ್ಲಿ ಅಥವಾ
ನಿಗಮದ ವೆಬ್ಸೈಟ್ನಲ್ಲಿ
ಪಡೆದು ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ
ಪ್ರಮಾಣ ಪತ್ರ, ಆಧಾರ್ ಕಾರ್ಡ್
ಮತ್ತು ಫೋಟೋವನ್ನು ಮತ್ತು ಇತರೆ ದಾಖಲಾತಿಗಳನ್ನು
ನಿಗಮದ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು
ಸಾಧ್ಯವಾಗದೆ ಇದ್ದಲ್ಲಿ ಭರ್ತಿ ಮಾಡಿದ ಅರ್ಜಿಯನ್ನು
ದಾಖಲಾತಿಗಳೊಡನೆ ಜಿಲ್ಲೆಯ ಡಿ.ದೇವರಾಜ
ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ
ವ್ಯವಸ್ಥಾಪಕರ ಕಛೇರಿಗೆ 2020ರ
ಆಗಸ್ಟ್ 03 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ದೂರವಾಣಿ ಸಂಖ್ಯೆ:
080-23536007
ಅನ್ನು ಸಂಪರ್ಕಿಸಬಹುದು
ಎಂದು ಜಿಲ್ಲಾ ವ್ಯವಸ್ಥಾಕರಾದ ಎನ್.
ಸುಜಾತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.