ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮವಾದ ನಾಲ್ಕನೇ ದಿನವಾದ ಇಂದು(ಜನವರಿ 20 ರಂದು) ನೀಡಲಾದ 1239 ಗುರಿಯಲ್ಲಿ ಒಟ್ಟು 549 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಐದು ಲಸಿಕಾ ಕೇಂದ್ರಗಳಲ್ಲಿ 494 ಗುರಿಯಲ್ಲಿ 158 ಮಂದಿಗೆ, ದೇವನಹಳ್ಳಿ ತಾಲ್ಲೂಕಿನ ಮೂರು ಲಸಿಕಾ ಕೇಂದ್ರಗಳಲ್ಲಿ ನೀಡಲಾದ 173 ಗುರಿಯಲ್ಲಿ 106 ಮಂದಿ ಆರೋಗ್ಯ ಕಾರ್ಯಕರ್ತರಿಗೆ, ಹೊಸಕೋಟೆ ತಾಲ್ಲೂಕಿನ ಐದು ಲಸಿಕಾ ಕೇಂದ್ರದಲ್ಲಿ 249 ಗುರಿಯಲ್ಲಿ 120 ಮಂದಿ ಹಾಗೂ ನೆಲಮಂಗಲ ತಾಲ್ಲೂಕಿನ ಆರು ಲಸಿಕಾ ಕೇಂದ್ರದಲ್ಲಿ 323 ಗುರಿಯಲ್ಲಿ 165 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.