ಬೆಂ.ಗ್ರಾ.ಜಿಲ್ಲೆ: ಜೈಲಿನಲ್ಲಿ ಸ್ನೇಹಿತರಾಗಿ ಹೊರಬಂದ ನಂತರ ಗ್ಯಾಂಗ್ ಕಟ್ಟಿಕೊಂಡು ದರೋಡೆ, ಸುಲಿಗೆ, ಕಳವು ಪ್ರಕರಣಗಳ ಭಾಗಿಯಾಗಿದ್ದ ಕುಖ್ಯಾತ 8 ಮಂದಿ ಆರೋಪಿಗಳನ್ನು ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರವಲಯ ಐಜಿಪಿ ಚಂದ್ರಶೇಖರ್ ತಿಳಿಸಿದರು.
ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ.1ರ ರಾತ್ರಿ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಚನಾ ಬಾರ್ ಕ್ಯಾಶರ್ನ ಅಡ್ಡಗಟ್ಟಿದ್ದ ಪ್ರಕರಣ ಹಾಗೂ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ ಬಳಿ ಇರುವ ಡಿ.19ರ ಮದ್ಯರಾತ್ರಿ ಪೆಟ್ರೋಲ್ ಬಂಕ್ ಮೇಲೆ ದಾಳಿಮಾಡಿ, ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಪ್ರಕರಣ ಕುರಿತು ರಾಜಾನುಕುಂಟೆ ಮತ್ತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಗಳ ಕುರಿತು ಪೊಲೀಸ್ ಅಧೀಕ್ಷಕ ರವಿ ಡಿ.ಚನ್ನಣ್ಣನವರ್, ಅಪರ ಪೊಲೀಸ್ ಅಧೀಕ್ಷಕ ಲಕ್ಷ್ಮೀಗಣೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಟಿ.ರಂಗಪ್ಪ, ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಅವರ ವಿಶೇಷ ತಂಡವನ್ನು ರಚಿಸಿ ಕೃತ್ಯದಲ್ಲಿ ಭಾಗಿಯಾಗಿದ್ದವರ ಬೆನ್ನತ್ತಲಾಗಿತ್ತು. ಸಿಸಿ ಡಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳ ಸಹಕಾರದೊಂದಿಗೆ ಆರೋಪಿಗಳಾದ ಅದ್ದೆ ಗ್ರಾಮದ ಚಿಕ್ಕೆಗೌಡ, ಭರತ್ ಕುಮಾರ್, ಲಗ್ಗೆರೆಯ ತೇಜಸ್,ವಿನಯ್, ಕಾರ್ತಿಕ್,ವಿಕ್ರಂ, ಕೆಂಗೇರಿಯ ರಜತ್, ಹಾಗೂ ಬಾಶೆಟ್ಟಿಹಳ್ಳಿಯ ಚೇತನ್ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಬಂಧಿತರು ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಮಧುಶ್ರೀ ವೈನ್ಸ್ ಕ್ಯಾಶಿಯರ್ ಮುಖಕ್ಕೆ ಪೆಪ್ಪರ್ ಸ್ಪೇ ಮಾಡಿ 1 ಲಕ್ಷ ನಗದು ದರೋಡೆ, ರೈಲ್ವೆ ಸ್ಟೇಷನ್ ಬಳಿ ರಿಲಯನ್ಸ್ ಪೆಟ್ರೋಲ್ ಬಂಕ್ ಕ್ಯಾಶಿಯರ್ ನ ಬೆದರಿಸಿ 25 ಸಾವಿರ ನಗದು ದರೋಡೆ, ನಗರದಲ್ಲಿ ಮಹಿಳೆಯಿಬ್ಬರು ಮನೆಯ ಮುಂದೆ ಕಸ ಗುಡಿಸುವಾಗ ಮಂಕಿ ಕ್ಯಾಪ್ ಧರಿಸಿ ಮಾಡಿದ ಸರಗಳ್ಳತನ ಮಾಡಿರುವುದಾಗಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆಕಾಶವಾಣಿ ಕೇಂದ್ರದ ಬಳಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ತಿವಿದು 3.500ರೂ ಸುಲಿಗೆ, ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾರ್ ಕ್ಯಾಶಿಯರ್ ಅಡ್ಡಗಟ್ಟಿ ಲಾಂಗ್ ನಿಂದ ಹಲ್ಲೆ ಮಾಡಿ 1ಲಕ್ಷ 91 ಸಾವಿರ ರೂ ನಗದು ದೋಚಿದ ಪ್ರಕರಣ, ಅರಕೆರ ಬಳಿ ಏಕ ಕಾಲದಲ್ಲಿ ಇಬ್ಬರು ಮಹಿಳೆಯರಿಗೆ ಲಾಂಗ್ ತೋರಿಸಿ ಮಾಂಗಲ್ಯ ಸರ ಕಿತ್ತುಕೊಂಡ ಪ್ರಕರಣ, ಸುರದೇನಹಳ್ಳಿ ಗೇಟ್ ನಲ್ಲಿ ಬಾರ್ ರೋಲಿಂಗ್ ಷಟರ್ ಮೀಟಿ 1ಲಕ್ಷ 40 ಸಾವಿರ ರೂ ನಗದು ಕಳವು, ಅದ್ದೆ ಗ್ರಾಮದಲ್ಲಿ ವ್ಯಕ್ತಿಯೋರ್ವನಿಗೆ ಮಚ್ಚು ತೋರಿಸಿ, ಮುಖಕ್ಕೆ ಪೆಪ್ಪರ್ ಸ್ಪ್ರೆ ಒಡೆದು ಚಿನ್ನದ ಚೈನು ಸುಲಿಗೆ, ಸೊಣ್ಣೆನಹಳ್ಳಿ ಗ್ರಾಮದ ಒಂಟಿ ಮಹಿಳೆಯಿಂದ ಮಾಂಗಲ್ಯ ಸರ ಸುಲಿಗೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಮತ್ತಷ್ಟು ಜನ ಬಾಗಿಯಾಗಿದ್ದು ಅವರನ್ನು ಶೀಘ್ರದಲ್ಲೆ ಬಂಧಿಸಲಾಗುವುದು ಎಂದರು.
ಬಂಧಿತ ಆರೋಪಿಗಳಿಂದ 11 ಲಕ್ಷ 90 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ದ್ವಿಚಕ್ರ ವಾಹನ, ನಾಲ್ಕು ಲಾಂಗ್, ನಾಲ್ಕು ಚಾಕು, ಎರಡು ಮಚ್ಚು, ನಾಲ್ಕು ಪೆಪ್ಪರ್ ಸ್ಪ್ರೇ ಬಾಟಲ್, ಒಂದು ಕಬ್ಬಿಣದ ರಾಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಜೈಲಿನಲ್ಲಿ ಸ್ನೇಹ / ಗ್ಯಾಂಗ್ ಕಟ್ಟಿಕೊಂಡು ದರೋಡೆ: ದೊಡ್ಡಬಳ್ಳಾಪುರದ ಚೇತನ್ ಹಾಗೂ ಲಗ್ಗೆರೆ ಕಾರ್ತಿಕ್ ಅಪರಾಧ ಪ್ರಕರಣಗಳಡಿಯಲ್ಲಿ ಬಂಧಿತರಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುವ ವೇಳೆ ಸ್ನೇಹ ಬೆಳೆದಿದ್ದು. ಜೈಲಿನಿಂದ ಹೊರಬಂದು ಗ್ಯಾಂಗ್ ಕಟ್ಟಿಕೊಂಡು ಈ ಕೃತ್ಯಕ್ಕೆ ಇಳಿದಿದ್ದರು. ಬಂಧಿತರೆಲ್ಲರು ಸುಮಾರು 20, 23 ವಯಸ್ಸಿನವರಾಗಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಯುವಕರು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕೇವಲ ಆರೋಪಿಗಳನ್ನು ಬಂಧಿಸುವುದಕ್ಕೆ ಪೊಲೀಸ್ ಇಲಾಖೆ ಸೀಮಿತವಾಗದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲಗಲಜ ಯುವ ಸಮುದಾಯವನ್ನು ಸರಿದಾರಿಗೆ ತರಲು ಎಸ್ಪಿ ರವಿ ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ 30 ಸಾವಿರ ಬಹುಮಾನ: ಆರೋಪಿಗಳು ಮತ್ತು ದರೋಡೆಯಾಗಿದ್ದ ವಸ್ತುಗಳ ಪತ್ತೆಗೆ ಶ್ರಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಪಿಎಸ್ಐ ಎಂ.ಶಂಕರಪ್ಪ, ಶ್ರೀಮನ್ ರಾಜ್, ಸೋಮಶೇಖರ್, ಸಿಬ್ಬಂದಿಗಳಾದ ಶ್ರೀನಿವಾಸಯ್ಯ, ಸಿ.ಎನ್. ಕೃಷ್ಣ, ವೆಂಕಟೇಶ್, ಮುನಿರಾಜು, ರಾಧಾಕೃಷ್ಣ, ಕುಮಾರ್, ನಾರಾಯಣಸ್ವಾಮಿ, ಮಂಜುನಾಥ್, ಹರಿಪ್ರಸಾದ್, ಜಗದೀಶ್ ಕುಮಾರ್, ಮಂಜುನಾಥ್, ಪ್ರಕಾಶ್, ವಿಠಲ್ ಉಳವಿ, ಶ್ರೀಶೈಲ ವಾಲೀಕಾರ, ಪಾಂಡುರಂಗ, ಕುಮಾರ್, ಸುನೀಲ್ ಬಾಸಗಿ, ಮತ್ತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಪಿಐ ಕಾಂತಾರಾಜು, ಪಿಎಸ್ ಐ ವಿನಾಯಕ್, ವೆಂಕಟರಮಣಪ್ಪ, ಸಿಬ್ಬಂದಿಗಳಾದ ಅನಂತರಾಜು, ಚೌಡೇಗೌಡ, ಚೇತನ್ ಕುಮಾರ್, ಅಭಯ್, ಸಂಗಪ್ಪ ಕಳಶ ರವರಿಗೆ 30 ಸಾವಿರ ನಗುದು ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರಶಂಸೆ ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ರವಿ ಡಿ.ಚನ್ನಣ್ಣನವರ್, ಅಪರ ಪೊಲೀಸ್ ಅಧೀಕ್ಷಕ ಲಕ್ಷ್ಮೀಗಣೇಶ್, ಡಿವೈಎಸ್ಪಿ ಟಿ.ರಂಗಪ್ಪ, ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.