ಬೆಂಗಳೂರು: ಕರೊನಾ ಸೋಂಕನ್ನು ತಡೆಗಟ್ಟುವ ಕಾರಣ ನಿಲ್ಲಿಸಲಾಗಿದ್ದ ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸುತ್ತಿದ್ದು, ಮುಂದಿನ ಹಂತವಾಗಿ ವಿದ್ಯಾಗಮಕ್ಕೆ ಸೀಮಿತವಾಗಿದ್ದ 6,7 ಮತ್ತು 8ನೇ ತರಗತಿಗಳನ್ನು ಫೆಬ್ರವರಿ 22ರಿಂದ ಪೂರ್ಣ ಪ್ರಮಾಣದ ತರಗತಿಗಳನ್ನು ಕೋವಿಡ್-19 ಮಾರ್ಗಸೂಚಿ ಅನುಸರಿಸಿ ಆರಂಭಿಸಲಾಗುವುದೆಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಶಾಲೆಗಳನ್ನು ಆರಂಭಿಸುವಂತೆ ಪೋಷಕರು ಹಾಗೂ ಶೈಕ್ಷಣಿಕ ಚಿಂತರಕ ಅಭಿಪ್ರಾಯ, ಮತ್ತು ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ಹಿಂದುಳಿದಿದ್ದಾರೆ. ಈ ಕಾರಣ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಶೈಕ್ಷಣಿಕ ಸಮಿತಿ ಸಭೆ ನಿರ್ಣಯಿಸಿದೆ. ಈ ಬಾರಿಯೂ ಮಕ್ಕಳ ಹಾಜರಾತಿ ಕಡ್ಡಾಯವಿಲ್ಲ, ಹಾಗೂ ಪೋಷಕರ ಅನುಮತಿ ಪತ್ರ ಕಡ್ಡಾಯ ಮಾಡಲಾಗಿದೆ. ಶಾಲೆಗೆ ಬರಲು ಇಚ್ಚಿಸದ ಮಕ್ಕಳಿಗೆ ಆನ್ಲೈನ್ ತರಗತಿ ಮುಂದುವರೆಯಲಿದೆ ಎಂದರು.
ಕಳೆದ ಎರಡು ದಿನಗಳಿಂದ ಕೇರಳ ರಾಜ್ಯದಿಂದ ಬಂದವರಿಗೆ ಕರೊನಾ ದೃಢಪಟ್ಟ ಕಾರಣ, ಬೆಂಗಳೂರು ನಗರ ಹಾಗೂ ಕೇರಳ ಗಡಿ ವ್ಯಾಪ್ತಿಯಲ್ಲಿ ಈ ನಿರ್ಣಯ ಅನ್ವಯಿಸದೆ ಕೇವಲ ವಿದ್ಯಾಗಮ ಮುಂದುವರೆಸಲಾಗುತ್ತಿದೆ.
ಮುಂದಿನ ವರ್ಷದ ಶೈಕ್ಷಣಿಕ ಚಟುವಟಿಕೆ ಜುಲೈ15ರಿಂದ ಆರಂಭಿಸಲಾಗುತ್ತದೆ. ಅಲ್ಲದೆ ಇತರೆ ಶಾಲೆಗಳ ಆರಂಭದ ಕುರಿತು ಶೀಘ್ರದಲ್ಲೇ ಸಭೆ ನಡೆಸಲಾಗುವುದೆಂದರು.
ಸಭೆಯಲ್ಲಿ ತಜ್ಞರ ಸಮಿತಿಯ ಡಾ.ಸುದರ್ಶನ, ಸೇರಿದಂತೆ ವಿವಿದ ಇಲಾಖೆ ಅಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…