ದೊಡ್ಡಬಳ್ಳಾಪುರ: ಸಂಬಳ ಹೆಚ್ಚಿಸದ ಕಾರಣ ಸಂಸಾರ ನಿಭಾಯಿಸುವುದಕ್ಕೆ ಕಷ್ಟವಾಗಿ ಮನನೊಂದ ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕ ಪ್ರದೇಶದಲ್ಲಿನ ಇಂಡೋ ಮಿಮ್ ಟೆಕ್ ಕಾರ್ಮಿಕ ಶಿವರಾಜ್(28) ಡೆತ್ ನೋಟ್ ಬರದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅದ್ದಿಗಾನಹಳ್ಳಿ ಗ್ರಾಮದ ಮನೆಯಲ್ಲಿಯೇ ನೇಣುಹಾಕಿಕೊಂಡಿರುವ ಶಿವರಾಜ್ ಬರೆದಿರುವ ಡೆತ್ ನೋಟ್ನಲ್ಲಿ ‘ನನ್ನ ಸಾವಿಗೆ ಕಾರ್ಖಾನೆಯಲ್ಲಿನ ಆಡಳಿತದವರೇ ಕಾರಣ’ ಎಂದು ಮೂರು ಜನರ ಹೆಸರನ್ನು ಬರೆದಿದ್ದಾನೆ.ಅಲ್ಲದೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ತಾಯಿ, ಅಕ್ಕ, ತಮ್ಮನನ್ನು ಕ್ಷಮೆ ಕೋರಿದ್ದಾನೆ.
ಕಂಪನಿಯಲ್ಲಿ ಬರುವ ವಿಮಾ ಹಣದಲ್ಲಿ ಅಡವಿಟ್ಟಿರುವ ಅಕ್ಕನ ಚಿನಾಭರಣಗಳನ್ನು ಬಿಡಿಸಿಕೊಡುವಂತೆ ಕೇಳಿಕೊಂಡಿದ್ದಾನೆ.
‘ದಾವಣಗೆರೆ ಮೂಲದ ಶಿವರಾಜ್ ಇಂಡೋ ವಿಮ್ ಟೆಕ್ ಕಾರ್ಖಾನೆಯಿಂದ ರೂ 22 ಸಾವಿರ ಸಂಬಳ ಪಡೆಯುತ್ತಿದ್ದ. ಡೆತ್ನೋಟ್ನಲ್ಲಿ ಹೆಸರು ಬರೆದಿರುವವರ ವಿರುದ್ದ ದೂರು ದಾಖಲಿಸಿಕೊಳ್ಳಲಾಗಿದ್ದು, ಡೆತ್ ನೋಟ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿವೈಎಸ್ಪಿ ಟಿ.ರಂಗಪ್ಪ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….