ದೊಡ್ಡಬಳ್ಳಾಪುರ: ಪಾಸಿಟಿವ್ ರೇಟ್ ಪಟ್ಟಿಯಲ್ಲಿ ಕೆಂಪು ವಲಯದಿಂದ ದೊಡ್ಡಬಳ್ಳಾಪುರ ತಾಲೂಕು ಹೊರಬಂದಿದ್ದು, ತಾಲೂಕಿನ ಜನತೆಗೆ ತುಸು ನೆಮ್ಮದಿಯನ್ನು ನೀಡಿದೆ.
ಜೂ.12ರ ಪಾಸಿಟಿವ್ ರೇಟ್ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೋಂಕು ದೃಢಪಡುತ್ತಿರುವ ಪ್ರಕರಣಗಳಲ್ಲಿ ಕುಸಿತಕಂಡಿದ್ದು, ಪಾಸಿಟಿವ್ ರೇಟ್ ಪಟ್ಟಿಯಲ್ಲಿ ಶೇ.25ಕ್ಕು ಹೆಚ್ಚಿದ್ದ ದೊಡ್ಡಬಳ್ಳಾಪುರ ತಾಲೂಕು ಶೇ.15ರಿಂದ20ರ ಒಳಗೆ ಬಂದಿದೆ.
ರಾಜ್ಯದ ಪಾಸಿಟಿವ್ ರೇಟ್ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಪ್ರಥಮ ಸ್ಥಾನಕ್ಕೇರಿ ರೆಡ್ ಝೋನ್ಗೆ ಗುರಿಯಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ತಲೆಬಿಸಿಗೆ ಕಾರಣವಾಗಿದ್ದು.
ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಕೆ, ಎಪಿಎಂಸಿ ಮಾರುಕಟ್ಟೆ ಅವಧಿ ಕಡಿತ, 7 ಗ್ರಾಮಗಳು ಸೀಲ್ಡೌನ್, ತಪಾಸಣೆ ಹೆಚ್ಚಳ, ತಾಲ್ಲೂಕಿನಾದ್ಯಂತ ಚಿಕನ್, ಮಟನ್ ಮತ್ತು ಎಲ್ಲಾ ತರಹದ ಮಾಂಸದ ಅಂಗಡಿಗಳನ್ನು ಜೂನ್ 21ರವರೆಗೆ ಸಂಪೂರ್ಣ ಬಂದ್ ಸೇರಿದಂತೆ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳ ಸೀಜ್ ಮಾಡುವ ಮೂಲಕ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕಠಿಣ ಲಾಕ್‍ಡೌನ್ ಮಾಡುವ ಮೂಲಕ ಸೋಂಕು ತಡೆಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಶ್ರಮಿಸಿತ್ತು.
ಈ ಎಲ್ಲಾ ಕಾರಣಗಳಿಂದ ರಾಜ್ಯದ ಪಾಸಿಟಿವ್ ರೇಟ್ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ರೆಡ್ ಝೋನ್ಗೆ ನಿಂದ ಹೊರಬಂದಿದೆ ಎನ್ನಲಾಗುತ್ತಿದೆ. ಆದಾಗ್ಯೂ ಪಟ್ಟಿಯಲ್ಲಿ ಶೇ.15ರಿಂದ 20ರ ಒಳಗಿರುವ ಕಾರಣ ಸಾರ್ವಜನಿಕರು ಮತ್ತಷ್ಟು ದಿನ ಅನಗತ್ಯ ಓಡಾಟಕಕ್ಕೆ ಸ್ಚಯಂ ನಿಯಂತ್ರಣ ಅಗತ್ಯವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….