ಚಿಕ್ಕಬಳ್ಳಾಪುರ: ಸಲಿಂಗಕಾಮತೃಷೆಗೆ ಸರ್ಕಾರಿ ಶಾಲಾ ಶಿಕ್ಷಕನೊರ್ವ ಕೊಲೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ. 42 ವರ್ಷದ ವಿಶ್ವನಾಥ್ ಕೊಲೆಯಾದ ಶಿಕ್ಷಕ. ಆಂದಹಾಗೆ ಕೊಲೆ ಮಾಡಿದವರು ಗೌರಿಬಿದನೂರು ನಗರದ ಆಕಾಶ್, ಮನು, ಮಂಜುನಾಥ್ ಹಾಗೂ ಶ್ರೀಕಾಂತ್.
ಮೂವರನ್ನು ಗೌರಿಬಿದನೂರು ನಗರ ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.
ಪ್ರಕರಣದ ಹಿನ್ನಲೆ: ಸರ್ಕಾರಿ ಶಾಲಾ ಶಿಕ್ಷಕ ವಿಶ್ವನಾಥ್ ಜೂನ್ 4 ರಂದು ರಾತ್ರಿ 8 ಗಂಟೆ ಸುಮಾರಿಗೆ ದ್ವಿಚಕ್ರ ವಾಹನ ನಿಲ್ಲಿಸಿ ಬರೋದಾಗಿ ಹೆಂಡತಿಗೆ ಹೇಳಿ ಹೊರ ಹೋಗಿದ್ದು… ರಾತ್ರಿ ಮನೆಗೆ ವಾಪಾಸ್ ಬಂದಿರಲಿಲ್ಲ. ಬೆಳಿಗ್ಗೆ ಪತ್ನಿ ಗೌರಿಬಿದನೂರು ನಗರ ಪೊಲೀಸರ ಮೊರೆ ಹೋಗಿದ್ರು. ಸಂಜೆ ವೇಳೆಗೆ ವಿಶ್ವನಾಥ್ ಮೃತದೇಹ ಗೌರಿಬಿದನೂರು ನಗರದ ಹಿರೇಬಿದನೂರು ಬಳಿಯ ಬೈಪಾಸ್ ರಸ್ತೆಯ ನರ್ಸಿಂಗ್ ಕಾಲೇಜು ಎದುರುಗಡೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಮೃತ ದೇಹವನ್ನು ಸಂಪೂರ್ಣ ಬೆತ್ತಲಾಗಿಸಿ ಪ್ಯಾಂಟ್ ನಿಂದ ಕಾಲುಗಳನ್ನ ಕಟ್ಟಿ ಹಾಕಿ, ಬಲವಾದ ಆಯುಧದಿಂದ ಹಲ್ಲೆ ಮಾಡಿ ಹೊಡೆದು ಕೊಲೆ ಮಾಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಮನು, ಆಕಾಶ್, ಮಂಜುನಾಥ್ ಎಂಬುವವರನ್ನ ಬಂಧಿಸಿದ್ದು…ಬಂಧಿತರು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಕೊಲೆಗೆ ಕಾರಣ ಏನು..?: ಕೊಲೆಯಾದ ಶಿಕ್ಷಕ ವಿಶ್ವನಾಥ್ ಹಾಗೂ ಕೊಲೆ ಆರೋಪಿತ ಆಕಾಶ್ ನಡುವೆ ದೈಹಿಕ ಸಂಪರ್ಕವಿತ್ತು ಎನ್ನಲಾಗಿದ್ದು, ಗ್ರಿಂಡರ್ ಅನ್ನೋ ಆಪ್ ಮೂಲಕ ಇಬ್ಬರು ಪರಿಚಯವಾಗಿ ದೈಹಿಕ ಸಂಪರ್ಕ ಬೆಳೆಸಿದ್ದರಂತೆ. ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದು. ಜೂನ್ 4 ರಂದು ಸಹ ಕಾಮತೃಷೆಗೆ ಅಂತ ಶಿಕ್ಷಕ ವಿಶ್ವನಾಥ್ ಗೆ ಪೋನ್ ಮಾಡಿ ಕರೆಸಿಕೊಂಡಿದ್ದ. ಆದ್ರೆ ಈ ವೇಳೆ ಶಿಕ್ಷಕ ವಿಶ್ವನಾಥ್ ಬಳಿ ದುಡ್ಡು ಕೀಳಬೇಕು ಎಂದು ತನ್ನ ಸ್ನೇಹಿತರಾದ ಮಂಜು ಹಾಗೂ ಮನು ಎಂಬುವವರನ್ನ ಕರೆಸಿಕೊಂಡಿದ್ದು.ಅವರು ಅವಿತು ಕುಳಿತಿದ್ದು, ದೈಹಿಕ ಸಂಪರ್ಕದ ವೇಳೆ ಸ್ಥಳಕ್ಕೆ ಬಂದು ಮಂಜು ಹಾಗೂ ಮನು ಹಾಗೂ ಆಕಾಶ್ ಶಿಕ್ಷಕನ ಮೊಬೈಲ್ ಕಸಿದುಕೊಂಡು ಅನ್ ಲೈನ್ ಮುಖಾಂತರ ದೊಡ್ಡಬಳ್ಳಾಪುರ ಮೂಲದ ಭಾಸ್ಕರ್ ಎಂಬುಬವರಿಗೆ ಮೊದಲು 1000 ಅಮೇಲೆ 10000 ದಂತೆ ಮೂರು ಬಾರಿ ಹಣ ವರ್ಗಾವಣೆ ಮಾಡಕೊಂಡಿದ್ದಾರೆ.
ಈ ಹಣ ವರ್ಗಾವಣೆಗೆ ಪಾಸ್ ವರ್ಡ್ ಹೇಳಿಲ್ಲ ಎಂದು ವಿಶ್ವನಾಥ್ ಗೆ ಕುಡಿದ ಅಮಲಿನಲ್ಲಿದ್ದ ಮೂವರು ದೊಣ್ಣೆ ಹಾಗೂ ಕೈ ಗಳಿಂದ ಬಲವಾಗಿ ಹಲ್ಲೆ ಮಾಡಿದ್ದು…ವಿಶ್ವನಾಥ್ ಸಾವನ್ನಪ್ಪಿರುತ್ತಾನೆ ಎನ್ನಲಾಗಿದೆ.
ಈ ಮೂವರ ಜೊತೆಗೆ ಕೊನೆಯಲ್ಲಿ ಶ್ರೀಕಾಂತ್ ಸಹ ಸೇರಿಕೊಂಡಿದ್ದಾನೆ ಎನ್ನಲಾಗಿದ್ದು, ಸದ್ಯ ಮೂವರನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಶ್ರೀಕಾಂತ್ ಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..